ಪಾಕಿಸ್ತಾನದ ರಕ್ಷಣಾ ಇಲಾಖೆಯು ತನ್ನ ಟ್ವೀಟರ್ ಖಾತೆಯಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಕಾವಲ್ ಪ್ರೀತ್ ಕೌರ್, ದೆಹಲಿಯ ಜುಮ್ಮಾ ಮಸೀದಿಯ ಮುಂಭಾಗದಲ್ಲಿ ಒಂದು ಪೋಸ್ಟರ್ ಹಿಡಿದು ನಿಂತಿರುವ ಫೋಟೋವನ್ನು ಪೋಸ್ಟ್ ಮಾಡಿದೆ.
ಪಾಕಿಸ್ತಾನದ ರಕ್ಷಣಾ ಇಲಾಖೆಯು ತನ್ನ ಟ್ವೀಟರ್ ಖಾತೆಯಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಕಾವಲ್ ಪ್ರೀತ್ ಕೌರ್, ದೆಹಲಿಯ ಜುಮ್ಮಾ ಮಸೀದಿಯ ಮುಂಭಾಗದಲ್ಲಿ ಒಂದು ಪೋಸ್ಟರ್ ಹಿಡಿದು ನಿಂತಿರುವ ಫೋಟೋವನ್ನು ಪೋಸ್ಟ್ ಮಾಡಿದೆ.
ಈ ಪೋಟೋದಲ್ಲಿ ಕಾವಲ್ ಪ್ರೀತ್ ಕೌರ್ ಭಾರತ ವಿರೋಧಿಯಾಗಿ ಮಾತನಾಡಿದ್ದು ‘ನಾನು ಭಾರತೀಯ ಪ್ರಜೆ, ಆದರೆ ನನಗೆ ಭಾರತವೆಂದರೆ ಆಗುವುದಿಲ್ಲ...’ ಎಂದು ಬರೆದಿದೆ. ನಿಜವಾಗಿಯೂ ಭಾರತದ ಪ್ರಜೆಯಾಗಿ ಕೌರ್ ಭಾರತದ ಬಗ್ಗೆ ಈ ಅಭಿಪ್ರಾಯ ಹೊಂದಿದ್ದರೇ, ಭಾರತ ವಿರೋಧಿಯಾಗಿ ದೇಶ ದ್ರೋಹದ ಕೆಲಸ ಮಾಡಿದ್ದರೇ ಎಂದು ಇದರ ಸತ್ಯಾಸತ್ಯತೆಯನ್ನು ತಿಳಿಯ ಹೊರಟಾಗ ಬಯಲಾದ ಸತ್ಯವೇ ಬೇರೆ.
ಇದೇ ವರ್ಷ ಜೂನ್ 27ರಂದು ಕೌರ್ ಅವರು ಕೋಮು ಸಂಘರ್ಷಗಳ ವಿರುದ್ಧದ ಪ್ರತಿಭಟನೆಯ ವೇಳೆ, ಜುಮ್ಮಾ ಮಸೀದಿ ಎದುರು ಒಂದು ಪೋಸ್ಟರ್ ಹಿಡಿದು ಪೋಟೋ ತೆಗೆಸಿಕೊಂಡಿದ್ದನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದರು. ಆ ಪೋಸ್ಟರ್‌ನಲ್ಲಿ ‘ ನಾನು ಭಾರತದ ನಾಗರಿಕಳಾಗಿದ್ದೇನೆ ಮತ್ತು ಸಂವಿಧಾನದ ಜಾತ್ಯತೀತ ಮೌಲ್ಯಗಳೊಂದಿಗೆ ನಿಲ್ಲುತ್ತೇನೆ.’ ಎಂದು ಬರೆದಿತ್ತು.
ಆದರೆ ಪಾಕಿಸ್ತಾನ ರಕ್ಷಣಾ ಇಲಾಖೆಯು ಫೋಟೋಶಾಪ್ ಮೂಲಕ ಈ ರೀತಿ ತಿರುಚಿ ಟ್ವೀಟರ್‌ನಲ್ಲಿ ಹಾಕಿದೆ. ಹೀಗಾಗಿ ಕೌರ್ ಅವರು ದೇಶವಿರೋಧಿ ಹೇಳಿಕೆ ನೀಡಿದ್ದಾರೆ ಎಂಬ ಸುದ್ದಿ ಸುಳ್ಳು ಎಂಬುದು ಸ್ಪಷ್ಟ
![[ವೈರಲ್ ಚೆಕ್] ಭಾರತ ವಿರೋಧಿ ಪೋಸ್ಟರ್ ಹಿಡಿದು ನಿಂತ ದೆಹಲಿ ವಿದ್ಯಾರ್ಥಿನಿ! [ವೈರಲ್ ಚೆಕ್] ಭಾರತ ವಿರೋಧಿ ಪೋಸ್ಟರ್ ಹಿಡಿದು ನಿಂತ ದೆಹಲಿ ವಿದ್ಯಾರ್ಥಿನಿ!](https://static.asianetnews.com/images/w-1280,h-720,imgid-bb0151e2-9f9e-4f89-a842-c6bcacc6d5c3,imgname-image.jpg)