ಮೋದಿ ಸರ್ಕಾರದ ನೀತಿಗೆ ಬೇಸತ್ತು ಮೂರನೇ ಮಹಡಿಯಿಂದ ಎತ್ತೊಂದು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದೆ' ಎಂಬರ್ಥದಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದ್ದು, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಯತ್ನ ಇಲ್ಲಿದೆ.
ಮನುಷ್ಯರು ಯಾವ್ಯಾವುದೋ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ನಿಜ. ಆದರೆ ಪ್ರಾಣಿಗಳೂ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎಂದರೆ ನಂಬುತ್ತೀರಾ? ಖಂಡಿತಾ ಇಲ್ಲ ತಾನೇ!, ಆದರೂ ಕೆಲವು ಕಿಡಿಗೇಡಿಗಳು, ‘ಮೂರನೇ ಮಹಡಿಯಿಂದ ಎತ್ತೊಂದು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದೆ' ಎಂಬರ್ಥದಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಯತ್ನ ಇಲ್ಲಿದೆ.

‘ಎತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೊ' ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿರುವ ಈ ವಿಡಿಯೋದೊಂದಿಗೆ, ‘ಹಸುವಿಗೆ (ಗೋವಿಗೆ) ನೀಡಲಾಗುವ ಪ್ರಾಮುಖ್ಯತೆಯನ್ನು ತನಗೆ ನೀಡಲಾಗುತ್ತಿಲ್ಲ ಎಂದು ಭಾವಿಸಿ, ಮೋದಿ ಸರ್ಕಾರದ ಬಗ್ಗೆ ಬೇಸತ್ತು ಎತ್ತು ಈ ನಿರ್ಧಾರ ಕೈಗೊಂಡಿದೆ' ಎಂಬರ್ಥದ ಸಂದೇಶ ಪ್ರಕಟಿಸಲಾಗಿದೆ. ಆದರೆ ಈ ವಿಡಿಯೋ 2015ರಲ್ಲಿ ಗುಜರಾತ್ನ ಭಾವನಗರದಲ್ಲಿ ಚಿತ್ರೀಕರಣಗೊಂಡಿದ್ದೆನ್ನಲಾಗಿದೆ.
ಮೂರು ಮಹಡಿಯ ಕಟ್ಟಡದ ಮೇಲೆ ಅಚಾನಕ್ಕಾಗಿ ಎತ್ತು ಬಂದಿತ್ತು. ಅದು ಅಲ್ಲಿಗೆ ಹೇಗೆ ತಲುಪಿತು ಎಂಬ ಬಗ್ಗೆ ಮಾಹಿತಿಗಳಿಲ್ಲ. ಇನ್ನೇನು ಅದು ಕಟ್ಟಡದ ಅಂಚಿನಲ್ಲಿ ಬೀಳುವ ಸಾಧ್ಯತೆಯನ್ನು ತಪ್ಪಿಸಲು ಕೆಲವರು ಯತ್ನಿಸಿದರಾದರೂ, ಅದು ಮೇಲಿನಿಂದ ಕೆಳಗೆ ಜಿಗಿದು ಸಾವಿಗೀಡಾದುದು ವಿಡಿಯೋದಲ್ಲಿ ಕಂಡು ಬರುತ್ತದೆ. ಇತ್ತೀಚೆಗೆ ಜಾನುವಾರು ಮಾರಾಟ ನಿಯಂತ್ರಣ ಅಧಿಸೂಚನೆ ಜಾರಿಯಾದ ಬಳಿಕ ವೈರಲ್ ಆಗಿರುವ ಈ ವೀಡಿಯೋ ನಿಜವಾದರೂ, ‘ಹಸುವಿಗೆ ಸಿಗುತ್ತಿರುವ ಪ್ರಾಧಾನ್ಯತೆಗೆ ಬೇಸತ್ತು ಎತ್ತು ಆತ್ಮಹತ್ಯೆ ಮಾಡಿಕೊಂಡಿದೆ' ಎನ್ನುವುದು ಸುಳ್ಳು.
