Asianet Suvarna News Asianet Suvarna News

ಅಮೃತಸರ ದುರಂತದ ರೈಲು ಚಾಲಕ ಆತ್ಮಹತ್ಯೆಗೆ ಶರಣು!?

ಕೆಲ ದಿನಗಳ ಹಿಂದೆ ವಿಜಯ ದಶಮಿಯ ದಿನ ಪಂಜಾಬಿನ ಅಮೃತಸರದ ಬಳಿ ರಾವಣ ದಹನ ಮಾಡಲು ಸೇರಿದ್ದ ಜನರ ಮೇಲೆ ರೈಲು ಹರಿದು 61 ಜನರು ಸಾವಿಗೀಡಾಗಿ, 72 ಜನರು ಮೃತಪಟ್ಟಿದ್ದರು. ಈ ದುರ್ಘಟನೆಯ ಬಳಿಕ ಈ ಕುರಿತ ಸುಳ್ಳುಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Viral Check Amritsar Jalandhar DMU train driver has not committed suicide
Author
Amritsar, First Published Oct 25, 2018, 10:37 AM IST

ಕೆಲ ದಿನಗಳ ಹಿಂದೆ ವಿಜಯ ದಶಮಿಯ ದಿನ ಪಂಜಾಬಿನ ಅಮೃತಸರದ ಬಳಿ ರಾವಣ ದಹನ ಮಾಡಲು ಸೇರಿದ್ದ ಜನರ ಮೇಲೆ ರೈಲು ಹರಿದು 61 ಜನರು ಸಾವಿಗೀಡಾಗಿ, 72 ಜನರು ಮೃತಪಟ್ಟಿದ್ದರು. ಈ ದುರ್ಘಟನೆಯ ಬಳಿಕ ಈ ಕುರಿತ ಸುಳ್ಳುಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸದ್ಯ ಅನುಮಾನಾಸ್ಮದವಾಗಿ ಸೇತುವೆಯೊಂದಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯವಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅದರೊಂದಿಗೆ ಅಮೃತಸರ ರೈಲು ದುರಂತದ ವೇಳೆ ರೈಲಿನ ಚಾಲಕನಾಗಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಇದು ಸದ್ಯ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವೀಟರ್‌ನಲ್ಲಿ ವೈರಲ್‌ ಆಗಿದೆ.

ಆದರೆ ಅಮೃತಸರದಲ್ಲಿ ನಡೆದ ರೈಲು ದುರಂತದ ವೇಳೆ ಆ ರೈಲಿನ ಚಾಲಕನಾಗಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವೇ ಎಂದು ಪರಿಶೀಲಿಸಿದಾಗ ಆ ಸುದ್ದಿ ಸುಳ್ಳು ಎಂಬುದು ಸ್ಪಷ್ಟವಾಗಿದೆ. ಅಮೃತಸರ ಪೊಲೀಸ್‌ ಕಮಿಷನರ್‌ ಎಸ್‌.ಶ್ರೀವಾಸ್ತವ ಅವರೇ ಈ ಬಗ್ಗೆ ಬೂಮ್‌ಗೆ ಸ್ಪಷ್ಟೀಕರಣ ನೀಡಿದ್ದು, ‘ರೈಲು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಸಂಪೂರ್ಣ ಸುಳ್ಳು’ಎಂದಿದ್ದಾರೆ. 

ಅಲ್ಲದೆ ಸಾಮಾಜಿಕ ಮಾಧ್ಯಗಳಲ್ಲಿ ಸೇತುವೆಯೊಂದಕ್ಕೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವ ವ್ಯಕ್ತಿ ರೈಲು ಚಾಲಕ ಅಲ್ಲ. ಆತ ಪಂಜಾಬ್‌ನ ತರಣ್‌ ಜಿಲ್ಲೆಯ ನಿವಾಸಿ. ಆತ ಕಳೆದ ಕೆಲ ವರ್ಷಗಳಿಂದ ಖಿನ್ನತೆಗೆ ಒಳಗಾಗಿದ್ದ. ಇದೇ ಕಾರಣದಿಂದಾಗಿ ಆತ ಅಕ್ಟೋಬರ್‌ 20ರಂದು ಅಮೃತಸರದ ಬೊಹ್ರು ಗ್ರಾಮದ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಬೊಹ್ರೊ ಗ್ರಾಮದ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios