ಈ ಘಟನೆ ನಡೆಯುವಾಗ ಹಳ್ಳಿಯ ಜನರು ಮೂಕಪ್ರೇಕ್ಷಕರಂತೆ ನೋಡುತ್ತಿದ್ದರು

ಕುಪ್ಪಂ(ಜ.18): ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ಅವರ ಕುಪ್ಪಂ ಕ್ಷೇತ್ರದಲ್ಲಿ ಮಹಿಳೆಯರಿಂದಲೇ ಮಹಿಳೆಯ ವಿವಸ್ತ್ರಗೊಳಿಸಿದ ಧಾರುಣ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿತ್ತೂರು ಜಿಲ್ಲೆಯ ಶಾಂತಪುರ ಮಂಡಲಂ ಗುಂಜಾರ್ಲಹಳ್ಳಿ ಗ್ರಾಮದಲ್ಲಿ ಅಕ್ರಮ ಸಂಬಂಧದ ಆರೋಪದ ಮೇಲೆ ಯುವತಿಯೊಬ್ಬಳನ್ನು ಹತ್ತಾರು ಮಹಿಳೆಯರು ಮನೆಯಿಂದ ಹೊರಗೆಳೆದು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ. ಈ ಘಟನೆ ನಡೆಯುವಾಗ ಹಳ್ಳಿಯ ಜನರು ಮೂಕಪ್ರೇಕ್ಷಕರಂತೆ ನೋಡುತ್ತಿದ್ದರು. ಕುಪ್ಪಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಸ್ತ್ರಗೊಳಿಸಿದ ಮಹಿಳೆಯ ವಿರುದ್ಧ ದೂರು ದಾಖಲಿಸಲಾಗಿದೆ.