ಪ್ರಕರಣ ನಡೆದು ಒಂಭತ್ತು ತಿಂಗಳಾದರೂ ನರೇಶ್ ಶೆಣೈ ನಂತರದ ತನಿಖೆ ಆಗಿಲ್ಲ. ಪ್ರಮುಖ ಆರೋಪಿ ನಮೋ ಬ್ರಿಗೇಡ್'ನ ನರೇಶ್ ಶೆಣೈ ಜಾಮೀನು ರದ್ದತಿಗೆ  ಕೋರಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ.

ಮಂಗಳೂರು (ನ.26): ಆರ್​ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಕುರಿತು ಮಂಗಳೂರಿನಲ್ಲಿ ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಹೇಳಿಕೆ ನೀಡಿದ್ದಾರೆ.

ಪ್ರಕರಣ ನಡೆದು ಒಂಭತ್ತು ತಿಂಗಳಾದರೂ ನರೇಶ್ ಶೆಣೈ ನಂತರದ ತನಿಖೆ ಆಗಿಲ್ಲ. ಪ್ರಮುಖ ಆರೋಪಿ ನಮೋ ಬ್ರಿಗೇಡ್'ನ ನರೇಶ್ ಶೆಣೈ ಜಾಮೀನು ರದ್ದತಿಗೆ ಕೋರಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ.

ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ ಎಂದಿದ್ದಾರೆ.

ಅಮಾಯಕರಾದರೆ ನರೇಶ್ ಶೆಣೈ ಯಾಕೆ ಮಂಪರು ಪರೀಕ್ಷೆ ಗೆ ಹಿಂಜರಿಯುತ್ತಿದ್ದಾರೆ? ನರೇಶ್ ಶೆಣೈ ಮಂಪರು ಪರೀಕ್ಷೆಗೆ ಸಮ್ಮತಿಸಲಿ.

ಶ್ರೀಗಳಿಗೆ ಬರೆದ ಪತ್ರವೇ ಬಾಳಿಗಾ ಹತ್ಯೆಗೆ ಪ್ರಮುಖ ಕಾರಣ. ಈ ಪತ್ರದ ಬಗ್ಗೆ ಸ್ವಾಮೀಜಿ ಮಾಹಿತಿ ನೀಡಲಿ. ವಿಚಾರಣೆ ವೇಳೆ ಕಾಶಿ ಮಠಾಧೀಶರಿಗೆ ಸಮನ್ಸ್ ಇದ್ದರೂ ವಿಚಾರಣೆಗೆ ಹಾಜರಾಗಿಲ್ಲ. ಪ್ರತಿನಿಧಿಯನ್ನು ಕಳುಹಿಸಿರುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ.