ವಿಜಯಪುರದಲ್ಲಿ ಸಮಾಜವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಗ್ರಾಮಸ್ಥರೆಲ್ಲಾ ಸೇರಿ ನಡುರಸ್ತೆಯಲ್ಲೇ ಬಟ್ಟೆ ಬಿಚ್ಚಿ ಮನಬಂದಂತೆ ಥಳಿಸಿದ್ದಾರೆ.
ವಿಜಯಪುರ(ಫೆ.12): ವಿಜಯಪುರದಲ್ಲಿ ಸಮಾಜವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಗ್ರಾಮಸ್ಥರೆಲ್ಲಾ ಸೇರಿ ನಡುರಸ್ತೆಯಲ್ಲೇ ಬಟ್ಟೆ ಬಿಚ್ಚಿ ಮನಬಂದಂತೆ ಥಳಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಶ್ರೀಕಾಂತ್ ಬೀರಗೊಂಡ ಎಂಬ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದ. ಈ ಕೊಲೆಯನ್ನ ಆತನ ಪತ್ನಿ ರೇಣುಕಾರೇ ಮಾಡಿಸಿದ್ದಾರೆ ಅನ್ನೋದು ಗ್ರಾಮಸ್ಥರ ಅನುಮಾನ. ಆದರೆ, ಆ ಮಹಿಳೆಯ ಬೆಂಬಲಕ್ಕೆ ಬಂದ ತಪ್ಪಿಗೆ ಈಗ ಮಹಿಳಾ ಸಂಘಟನೆ ಕಾರ್ಯಕರ್ತೆಯೊಬ್ಬರನ್ನು ಗ್ರಾಮಸ್ಥರು ನಡುಬೀದಿಯಲ್ಲಿ ಬಟ್ಟೆ ಬಿಚ್ಚಿ ಅವಮಾನ ಮಾಡಿದ್ದಾರೆ. ಮನಬಂದಂತೆ ಥಳಿಸಿದ್ದಾರೆ.
ಕೊಲೆ ಆರೋಪಿಗೆ ಮಹಿಳಾ ಸಂಘಟನೆ ಕಾರ್ಯಕರ್ತೆ ರಕ್ಷಣೆ ಕೊಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
