ಕರ್ನಾಟಕದ ಪ್ರಸಿದ್ಧ ದೇಗುಲ ಬಂದ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Aug 2018, 1:26 PM IST
Villagers Protest Mysuru Chennakeshava Temple Shut Down
Highlights

ಕರ್ನಾಟಕದ ಪ್ರಸಿದ್ಧ ದೇವಾಲಯವನ್ನು ಮುಚ್ಚಲಾಗಿದ್ದು ಇದರಿಂದ ದೇವಾಲಯದ ವೀಕ್ಷಣೆಗೆ ತೆರಳಿದ ಪ್ರವಾಸಿಗರು ನಿರಾಸೆಯಿಂದ ಮರಳುತ್ತಿದ್ದಾರೆ. 

ಮೈಸೂರು :  ಭಾರತೀಯ ಪುರಾತತ್ವ ಇಲಾಖೆ  ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪ್ರಸಿದ್ಧ ಸೋಮನಾಥಪುರದ ಪ್ರಸಿದ್ಧ ಚೆನ್ನಕೇಶವ  ದೇವಾಲಯ ಬಂದ್ ಮಾಡಲಾಗಿದೆ. 

ಮೈಸೂರಿನ ಟಿ. ನರಸೀಪುರ ತಾಲೂಕಿನಲ್ಲಿರುನ ಈ ದೇವಾಲುದ ಪ್ರವೇಶ ದ್ವಾರದ ಗೇಟ್ ಗೆ ಬೀಗ ಹಾಕಿದ್ದು, ವೀಕ್ಷಣೆಗೆ ತೆರಳಿದ ಪ್ರವಾಸಿಗರು ನಿರಾಸೆಯಿಂದ ವಾಪಸ್ ಬಂದಿದ್ದಾರೆ.  ಪುರಾತತ್ವ ಇಲಾಖೆ ನಿರ್ಬಂಧದಿಂದ ಆಶ್ರಯ ಮನೆಗಳ ನಿರ್ಮಾಣಕ್ಕೆ ಸಿಗದ ಅನುಮತಿ ಸಿಗದ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ದೇವಾಲಯದ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.  

2010 ರಲ್ಲಿ ದೇವಾಲಯದ ಸುತ್ತ 100 ಮೀಟರ್ ವರೆಗೆ ನಿರ್ಭಂದಿತ ಪ್ರದೇಶ ಮತ್ತು 300 ಮೀಟರ್ ವರೆಗೂ ನಿಯಂತ್ರಿತ  ಪ್ರದೇಶವೆಂದು ಘೋಷಣೆ ಮಾಡಲಾಗಿದ್ದು ಇದರಿಂದ  ಪುರಾತತ್ವ ಇಲಾಖೆ ಮನೆ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ. 

ಕೇಂದ್ರ ಸರ್ಕಾರದ ಈ ನಿಯಮದಿಂದ ಗ್ರಾಮಸ್ಥರು ಸಾಕಷ್ಟು ತೊಂದರೆಗೆ ಒಳಗಾಗಿದ್ದು, ಶಿಥಿಲಗೊಂಡಿರುವ ಮನೆಗಳ ಪುನರ್ ನಿರ್ಮಾಣಕ್ಕೆ ಅವಕಾಶ ಕೊಡಿ ಎಂದು ಪ್ರತಿಭಟನೆಗೆ ಇಳಿದಿದ್ದಾರೆ.  ಇಡೀ ಸೋಮನಾಥಪುರ ಗ್ರಾಮದಲ್ಲೇ ಯಾವ ಕಾಮಗಾರಿಗಳೂ ನಡೆಯುವಂತಿಲ್ಲ. ನಮ್ಮ ಸಮಸ್ಯೆ ಬಗೆಹರಿಯುವ ತನಕ ಹೋರಾಟ ಕೈಬಿಡುವುದಿಲ್ಲವೆಂದು ಗ್ರಾಮಸ್ಥರ ಬಿಗಿಪಟ್ಟು ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ  ಸ್ಥಳಕ್ಕೆ ಶಾಸಕ ಅಶ್ವಿನ್ ಕುಮಾರ್ ಭೇಟಿ ನೀಡಿದ್ದು, ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ. 

loader