ವಿಮಾನದಲ್ಲಿ ನಟಿ ಝೈರಾ ವಾಸಿಂಗೆ ತಾವು ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಈ ಪ್ರಕರಣದಲ್ಲಿ ಬಂಧಿತ ವಿಕಾಸ್ ಸಚ್‌ದೇವ್ ಹೇಳಿದ್ದಾರೆ. 

ಮುಂಬೈ: ವಿಮಾನದಲ್ಲಿ ನಟಿ ಝೈರಾ ವಾಸಿಂಗೆ ತಾವು ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಈ ಪ್ರಕರಣದಲ್ಲಿ ಬಂಧಿತ ವಿಕಾಸ್ ಸಚ್‌ದೇವ್ ಹೇಳಿದ್ದಾರೆ. ‘ದಿಲ್ಲಿಯಲ್ಲಿ ನನ್ನ ಮಾವನ ಅಂತ್ಯ ಕ್ರಿಯೆ ಮುಗಿಸಿಕೊಂಡು ಮುಂಬೈಗೆ ವಾಪಸು ಬರುತ್ತಿದ್ದೆ. ಮುಂಬೈನಿಂದ ದಿಲ್ಲಿಗೆ ಹೋಗಿ ಅಲ್ಲಿ ಅಂತ್ಯಕ್ರಿಯೆ ಮುಗಿಸಿಕೊಂಡು ವಾಪಸು ಬರುವವರೆಗೆ ಕಿಂಚಿತ್ತೂ ನಿದ್ರಿಸಿರಲಿಲ್ಲ. ಹೀಗಾಗಿ ಮರಳಿ ಮುಂಬೈಗೆ ಬರುವಾಗ ವಿಮಾನದಲ್ಲಿ ನಿದ್ರಿಸುತ್ತಿದ್ದೆ. ನಿದ್ರೆಯ ಮಂಪರಿನಲ್ಲಿ ನಾನು ಮುಂದಿನ ಸೀಟಿನ ಕೈ ಮೇಲೆ ಕಾಲಿಟ್ಟಿದ್ದೇನೆ. ಈ ಪ್ರಮಾದ ಗೊತ್ತಾದ ಕೂಡಲೇ ಮುಂದಿದ್ದ ಪ್ರಯಾಣಕಿ ಬಳಿ ಕ್ಷಮೆ ಯಾಚಿಸಿದೆ’ ಎಂದು ಸಚ್‌ದೇವ್ ಹೇಳಿದ್ದಾರೆ.