ವಿಜಯಪುರ (ಸೆ.26): ವಿಜಯಪುರ ಜಿಲ್ಲೆಗೂ ಕಾವೇರಿ ವಿವಾದದ ಬಿಸಿ ತಟ್ಟಿದೆ. ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಹಂದಿಗಳ ಉಪಟಳ ಹೆಚ್ಚಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಕ್ಕೆ ಕಡಿವಾಣ ಹಾಕಲು ಪಾಲಿಕೆ ತಮಿಳುನಾಡು ಮೂಲದ ತಂಡವೊಂದಕ್ಕೆ ಹಂದಿ ಹಿಡಿಯುವ ಗುತ್ತಿಗೆ ನೀಡಿತ್ತು.

ಆದರೆ ಒಂದೆರಡು ದಿನ ಕಾರ್ಯಾಚರಣೆ ನಡೆಸಿದ ತಂಡ, ಕಾವೇರಿ ಗಲಾಟೆ ನಂತರ ತಮಿಳುನಾಡಿಗೆ ವಾಪಸ್ ಹೋಗಿದ್ದಾರೆ.

ಇದರಿಂದಾಗಿ ನಗರದಲ್ಲಿ ಹಂದಿಗಳ ಕಾಟ ಹೆಚ್ಚಾಗಿದ್ದು ಅವ್ರುಗಳಿಂದ ಕಡಿತದ ಪ್ರಕರಣಗಳು ಕೂಡ ಹೆಚ್ಚಾಗುತ್ತಿದ್ದು ಪಾಲಿಕೆ ಅಧಿಕಾರಿಗಳ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.