ಮೇಟಿಯವರು ನನ್ನ ಸಂಬಂಧ ತಂದೆ ಮಗಳ ಸಂಬಂಧ. ಮೇಟಿ ಮಕ್ಕಳು ನನ್ನ ಸಹೋದರ ಮತ್ತು ಸಹೋದರರಿದ್ದ ಹಾಗೆ.

ಬೆಂಗಳೂರು(ಡಿ.12): ಸಚಿವ ಎಚ್​.ವೈ.ಮೇಟಿ ವಿರುದ್ಧ ರಾಸಲೀಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ ಸ್ಪಷ್ಟಿಕರಣ ನೀಡಿದ್ದು, ಹೆಚ್.ವೈ.ಮೇಟಿ ಜೊತೆ ಮಾಡಿರೋ ನನ್ನ ಸಂಬಂಧ ಸುಳ್ಳು. ಮೇಟಿ ಮತ್ತು ನನ್ನ ನಡುವೆ ಯಾವುದೇ ಅಕ್ರಮ ಸಂಬಂಧವಿಲ್ಲ' ಎಂದು ತಿಳಿಸಿದ್ದಾರೆ.

ಮೇಟಿಯವರು ನನ್ನ ಸಂಬಂಧ ತಂದೆ ಮಗಳ ಸಂಬಂಧ. ಮೇಟಿ ಮಕ್ಕಳು ನನ್ನ ಸಹೋದರ ಮತ್ತು ಸಹೋದರರಿದ್ದ ಹಾಗೆ. ನನ್ನ ವಿರುದ್ಧ ಮಾಡಿರೋ ಆರೋಪದಿಂದ ನಾನು ನೊಂದಿದ್ದೇನೆ.ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆಡಿಯೋ ಮತ್ತು ವಿಡಿಯೋದಲ್ಲಿರೋವವಳು ನಾನಲ್ಲ. ಇದೆಲ್ಲಾ ಯಾರೋ ಮಾಡಿರೋ ಷಡ್ಯಂತ್ರ. ಪ್ರಕರಣ ಸಂಬಂಧ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಎರಡು ದಿನದಲ್ಲಿ ಮಾಧ್ಯಮದ ಮುಂದೆ ಪ್ರಸ್ತಾಪಿಸುತ್ತೇನೆ' ಎಂದು ವಿಜಯಲಕ್ಷ್ಮಿತಿಳಿಸಿದ್ದಾರೆ.