- ಗುಜರಾತ್‌ನಲ್ಲಿ 99 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆ ಏರಿದ ಬಿಜೆಪಿ.- ವಿಜಯ್ ರೂಪಾನಿ ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಸಾರಿ ಆಯ್ಕೆ.- ಬಿಜೆಪಿ ಅಥವಾ ಮೈತ್ರಿ ಪಕ್ಷಗಳೊಂದಿಗೆ ಆಡಳಿತವಿರುವ 18 ರಾಜ್ಯಗಳ ಮುಖ್ಯಮಂತ್ರಿಗಳೂ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಭಾಗಿ.
ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ, ಉಪ ಮುಖ್ಯಮಂತ್ರಿಯಾಗಿ ನಿತಿನ್ ಪಟೇಲ್ ಇಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಬಿಜೆಪಿ ಅಥವಾ ಪಕ್ಷದ ಮೈತ್ರಿಯೊಂದಿಗೆ ಆಡಳಿತವಿರುವ 18 ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನೆರವೇರಿತು.
ರೂಪಾನಿ ರಾಜ್ಯದ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದು, ಇದು ಎರಡನೇ ಬಾರಿ. ಇವರೊಂದಿಗೆ ದಿಲೀಪ್ ಕುಮಾರ್ ವಿರಾಜಿ ಠಾಕೂರ್, ಇಶ್ವರ್ಬಾಯಿ ರಮಣ್ಬಾಯಿ ಪರ್ಮಾರ್, ಪ್ರದೀಪ್ ಸಿನ್ಙ ಜಡೇಜಾ, ಸೌರಭ್ ಪಟೇಲ್, ಜಯೇಶ್ ಬಾಯಿ ವಿಟ್ಟಲ್ಬಾಯಿ ರಾದಾದೀಯ ಸೇರಿ ಹಲವರು ಸಂಪುಟ ಸಚಿವರವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಗುಜರಾತ್ನಲ್ಲಿ ಬಿಜೆಪಿ 6ನೇ ಅವಧಿಗೆ ಅಧಿಕಾರಕ್ಕೆ ಬಂದಿದ್ದು, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 99 ಸ್ಥಾನಗಳನ್ನು ಪಡೆದು, ಸರಳ ಬಹುಮತದೊಂದಿಗೆ ಅಧಿಕಾರಿದ ಗದ್ದುಗೆ ಏರಿದೆ. ಕಳೆದ ಸಲಕ್ಕಿಂತ 16 ಸ್ಥಾನ ಕಡಿಮೆ ಬಂದಿದ್ದರೂ, ಅಧಿಕಾರಕ್ಕೆ ಬಂದ ತೃಪ್ತಿ ಬಿಜೆಪಿಗಾದರೆ, ಆಡಳಿತರೂಢ ಪಕ್ಷ ಮೂರಂಕಿ ಸ್ಥಾನಗಳನ್ನು ಸಿಗದಂತೆ ಎಚ್ಚರವಹಿಸಿದ ಕಾಂಗ್ರೆಸ್ಗೆ ಸೋತರೂ, ಗೆದ್ದ ಸಂಭ್ರಮ.
