ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಅಧಿಕೃತ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಆದ ಬೆನ್ನಲ್ಲೇ, ಇದೀಗ ಮದ್ಯದ ದೊರೆ ವಿಜಯ್ ಮಲ್ಯ ಅವರ ಎಕೌಂಟ್ ಕೂಡ ಹ್ಯಾಕ್ ಆಗಿದೆ.

ಬೆಂಗಳೂರು (ಡಿ.09): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಅಧಿಕೃತ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಆದ ಬೆನ್ನಲ್ಲೇ, ಇದೀಗ ಮದ್ಯದ ದೊರೆ ವಿಜಯ್ ಮಲ್ಯ ಅವರ ಎಕೌಂಟ್ ಕೂಡ ಹ್ಯಾಕ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹ್ಯಾಕರ್ ಗಳು ವಿಜಯ್ ಮಲ್ಯ ಕುರಿತಂತೆ ಹಲವು ಅಸಭ್ಯ ಟ್ವೀಟ್ ಗಳನ್ನ ಹಾಕಿದ್ದಾರೆ. ಈ ಫ್ರಾಡ್ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಷಯಗಳನ್ನ ನಿಮ್ಮ ಮುಂದೆ ಇಡಲಿದ್ದೇವೆ ಎಂದು ಪೋಸ್ಟ್ ಮಾಡಿದ್ದು, ಮಲ್ಯರ ಬ್ಯಾಂಕ್ ಅಕೌಂಟ್ಸ್ ಮತ್ತು

ವಿದೇಶಿ ಆಸ್ತಿಗಳ ಕುರಿತಂತೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ ಎಂದು ಹ್ಯಾಕರ್ ಗಳು ಹೇಳಿದ್ದಾರೆ.

ಇನ್ನು, ತನ್ನ ಅಕೌಂಟ್ ಅನ್ನು ಲೀಜನ್ ಎಂಬ ತಂಡ ಹ್ಯಾಕ್ ಮಾಡಿದೆ ಎಂದು ಟ್ವಿಟರ್ ನಲ್ಲಿ ಮಲ್ಯ ಬರೆದುಕೊಂಡಿದ್ದಾರೆ.