ಫಾರ್ಮುಲಾ-1ನಲ್ಲಿ ಪ್ರವೇಶ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದ್ದರೂ ಭಾರತೀಯ ಮಾಧ್ಯಮಗಳು ಅದನ್ನು ಕಡೆಗಣಿಸುತ್ತಿವೆಯೆಂದು ಸರಣಿ ಟ್ವೀಟ್ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಫೆ,23): ಬ್ಯಾಂಕುಗಳಿಗೆ ಸಾವಿರಾರು ಕೋಟಿ ಹಣವನ್ನು ಬಾಕಿಯಿಟ್ಟು ಲಂಡನ್’ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಭಾರತೀಯ ಮಾದ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.
ವಿಜಯ್ ಮಲ್ಯ ಒಡೆತನದ ಸಹಾರಾ ಫೋರ್ಸ್ ಇಂಡಿಯಾ ತಂಡವು ಫಾರ್ಮುಲಾ ರೇಸಿಂಗ್’ಗೆ ಪ್ರವೇಶ ಪಡೆದಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಇದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದ್ದರೂ ಭಾರತೀಯ ಮಾಧ್ಯಮಗಳು ಅದನ್ನು ಕಡೆಗಣಿಸುತ್ತಿವೆಯೆಂದು ಸರಣಿ ಟ್ವೀಟ್ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫಾರ್ಮುಲಾ 1ಕ್ಕೆ ಭಾರತವು ಪ್ರವೇಶಿಸಿರುವುದು ಭಾರತೀಯ ಮಾಧ್ಯಮಗಳಿಗೆ ಹೆಮ್ಮೆಯ ವಿಚಾರವಲ್ಲ. ಅವುಗಳು ನನ್ನನ್ನು ಗುರಿಯಾಗಿಸುವುದರಲ್ಲೇ ನಿರತವಾಗಿವೆ ಎಂದು ಟ್ವೀಟಿಸಿದ್ದಾರೆ.
