ಕಿಂಗ್‌ ಫಿಷರ್‌ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿದ್ದ ಪಿಂಕಿ ಲಾಲ್‌ವಾನಿ ಜತೆ ಸಂಬಂಧ ಹೊಂದಿದ್ದ ವಿಜಯ್‌ಮಲ್ಯ ಇದೀಗ ಆಕೆಯನ್ನು ಎರಡನೇಯ ಪತ್ನಿಗೆ ವಿಚ್ಛೇದನ ನೀಡದೆ ಮದುವೆಯಾಗ್ತಿದ್ದಾರೆ ಎಂಬ ವಿಷಯ ಹರಿದಾಡ್ತಿದೆ.

ಭಾರತದಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿ, ಲಂಡನ್'ನಲ್ಲಿ ಕುಳಿತಿರುವ ಉದ್ಯಮಿ ವಿಜಯ್ ಮಲ್ಯ. ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಯಾವುದೇ ದೇಶಕ್ಕೆ ವಂಚನೆ ಮಾಡಿದ ಪ್ರಕರಣದಲ್ಲಿ ಅಲ್ಲ. ಬದಲಾಗಿ ಮತ್ತೊಂದು ಮದುವೆ ಆಗ್ತಿದ್ದಾರಂತೆ ಮದ್ಯದ ದೊರೆ.

62ನೇ ವಯಸ್ಸಿನಲ್ಲಿ ಮತ್ತೊಂದು ಮದುವೆ..!

ಈಗಾಗಲೇ 62 ವರ್ಷ ಪೂರೈಸಿರುವ ವಿಜಯ್ ಮಲ್ಯ... ಮೂರನೇ ಮದುವೆಯಾಗಲು ಸಿದ್ಧರಾಗ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಕಿಂಗ್‌ ಫಿಷರ್‌ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿದ್ದ ಪಿಂಕಿ ಲಾಲ್‌ವಾನಿ ಜತೆ ಸಂಬಂಧ ಹೊಂದಿದ್ದ ವಿಜಯ್‌ಮಲ್ಯ ಇದೀಗ ಆಕೆಯನ್ನು ಎರಡನೇಯ ಪತ್ನಿಗೆ ವಿಚ್ಛೇದನ ನೀಡದೆ ಮದುವೆಯಾಗ್ತಿದ್ದಾರೆ ಎಂಬ ವಿಷಯ ಹರಿದಾಡ್ತಿದೆ.

ಈಗಾಗಲೇ ಮೊದಲು ಪತ್ನಿ ಸಮೀರಾ ತ್ಯಾಬ್ಜಿಗೆ ವಿಚ್ಛೇದನ ನೀಡಿದ ಎರಡನೇ ಪತ್ನಿ ರೇಖಾ ಮಲ್ಯ ಜೊತೆ ವಾಸವಾಗಿರುವ ವಿಜಯ್ ಮಲ್ಯ. ತನ್ನದೇ ಒಡೆತನದ ಕಿಂಗ್ ಫಿಷರ್ ಏರ್'ಲೈನ್ಸ್'ನಲ್ಲಿ ಗನಸಖಿಯಾಗಿದ್ದ ಪಿಂಕಿ ಲಾಲ್ವಾನಿ ಜೊತೆ ಗೆಳೆತನ ಹೊಂದಿದ್ದರು. ಇದೀಗ, ಮದುವೆಯಾಗ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.

ಒಟ್ಟಿನಲ್ಲಿ ಭಾರತಕ್ಕೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಬಂಧನದ ಭೀತಿ ಎದುರಿಸುತ್ತಿರುವ ಮಲ್ಯ ತನ್ನ ಶೋಕಿ ಮಾತ್ರ ನಿಲ್ಲಿಸಿಲ್ಲ.