ವಿಜಯ್ ಮಲ್ಯಗೆ ಏ.3ರವರೆಗೆ ಜಾಮೀನು

First Published 12, Jan 2018, 12:24 PM IST
Vijay Mallya gets bail till April 2
Highlights

ಗಡೀಪಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಉದ್ಯಮಿ ವಿಜಯ್ ಮಲ್ಯ ವಿಚಾರಣೆ ಅಪೂರ್ಣಗೊಂಡಿದ್ದು, ಏ.3ರ ವರೆಗೆ ಜಾಮೀನು ನೀಡಲಾಗಿದೆ.

ಲಂಡನ್( ಜ.12): ಗಡೀಪಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಉದ್ಯಮಿ ವಿಜಯ್ ಮಲ್ಯ ವಿಚಾರಣೆ ಅಪೂರ್ಣಗೊಂಡಿದ್ದು, ಏ.3ರ ವರೆಗೆ ಜಾಮೀನು ನೀಡಲಾಗಿದೆ. ಅಕ್ರಮ ಹಣ ವರ್ಗಾವಣೆ ಮತ್ತು ಗಡೀಪಾರು ಪ್ರಕರಣದ ವಿಚಾರಣೆಗೆ ಮಲ್ಯ ಲಂಡನ್ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿದ್ದರು.

ಆದರೆ, ಪ್ರಾಸಿಕ್ಯೂಶನ್ ವಾದ ಮುಕ್ತಾಯ ಗೊಳಿಸದ ಕಾರಣ ವಿಚಾರಣೆ ಅಪೂರ್ಣಗೊಂಡಿದೆ. ಮುಂದಿನ ವಿಚಾರಣೆಗೆ ದಿನಾಂಕ ನಿಗದಿಯಾಗದ ಕಾರಣ ಏ.3ರ ವರೆಗೆ ಜಾಮೀನು ನೀಡಲಾಗಿದೆ.

loader