ಉದ್ಯಮಿ ವಿಜಯ್ ಮಲ್ಯ ವಿರುಧ್ಧ ಸಲ್ಲಿಸಿದ್ದ ನ್ಯಾಯಾಂಗ ಉಲ್ಲಂಘನೆ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ. 2016 ಮಾರ್ಚ್ 31 ರಲ್ಲಿ ನನ್ನ ಕೈಯಲ್ಲಿ ರೂ.16,440 ನಗದು ಹಣವಿತ್ತು ಎಂದು ಮಲ್ಯ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ.

ನವದೆಹಲಿ (ಅ.25): ಉದ್ಯಮಿ ವಿಜಯ್ ಮಲ್ಯ ವಿರುಧ್ಧ ಸಲ್ಲಿಸಿದ್ದ ನ್ಯಾಯಾಂಗ ಉಲ್ಲಂಘನೆ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ. 2016 ಮಾರ್ಚ್ 31 ರಲ್ಲಿ ನನ್ನ ಕೈಯಲ್ಲಿ ರೂ.16,440 ನಗದು ಹಣವಿತ್ತು ಎಂದು ಮಲ್ಯ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ.

ಉದ್ಯಮಿ ವಿಜಯ್ ಮಲ್ಯ ಭಾರತ ಮತ್ತು ವಿದೇಶದಲ್ಲಿರುವ ಆಸ್ತಿಯ ಮೊತ್ತವನ್ನು ಬಹಿರಂಗಪಡಿಸದೇ ನ್ಯಾಯಾಂಗ ಆದೇಶವನ್ನು ಉಲ್ಲಂಘನೆ ಮಾಡಿದ್ದರು ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು.

ಇಂದು ಮಲ್ಯ ತಮ್ಮ ಆಸ್ತಿಯನ್ನು ಬಹಿರಂಗಪಡಿಸಿದ್ದಾರೆ. ಮಾರ್ಚ್ 31, 2016 ರಲ್ಲಿ ಕೈಯಲ್ಲಿ ರೂ.16,440 ನಗದು ಹಣವಿತ್ತು. ಭಾರತ ಮತ್ತು ವಿದೇಶದಲ್ಲಿ ಸೇರಿಸಿ ಒಟ್ಟು ರೂ.12.6 ಕೋಟಿ ಆಸ್ತಿಯಿದೆ ಎಂದು ಬಹಿರಂಗಪಡಿಸಿದ್ದಾರೆ.