ಚೆನ್ನೖ :  ತಮಿಳುನಾಡಿನಲ್ಲಿ ಚಲನಚಿತ್ರ ನಟರ ಅಭಿಮಾನಿಗಳ ಹುಚ್ಚು ಅಭಿಮಾನ ಹೊಸದೇನಲ್ಲ. 

ಈ ಅಭಿಮಾನ ಇದೀಗ ಕೇರಳಕ್ಕೂ ವಿಸ್ತರಿಸಿದಂತಿದೆ. ಕಾರಣ ತಮಿಳಿನ ಖ್ಯಾತ ನಟ ವಿಜಯ್ ಅವರ 175 ಅಡಿ ಎತ್ತರದ ಕಟೌಟ್ ಒಂದನ್ನು ಅಭಿಮಾನಿಗಳು ಕೊಲ್ಲಂನಲ್ಲಿ ಹಾಕಿದ್ದಾರೆ. 

ಇದು ದೇಶದಲ್ಲೇ ಯಾವುದೇ ನಟನ ಅತ್ಯಂತ ಎತ್ತರದ ಕಟೌಟ್ ಎಂಬ ದಾಖಲೆ ಪಡೆದುಕೊಂಡಿದೆ. 

ವಿಜಯ ಅಭಿನಯದ ಸರ್ಕಾರ್ ಚಿತ್ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹೊಸ ಕಟೌಟ್ ತಯಾರಿಸಲಾಗಿದೆ.