ಮುನಿಸಿಕೊಂಡ ನಿಸರ್ಗ ಸದ್ಯಕ್ಕೆ ಸುಮ್ಮನಾಗುವಂತೆ ಕಾಣೂತ್ತಿಲ್ಲ. ಒಂದೆಲ್ಲಾ ಒಂದು ದೇಶದಲ್ಲಿ ನೈಸರ್ಗಿಕ ಅವಘಡ ಸಂಭವಿಸುತ್ತಲೆ ಇದೆ. ಇದೀಗ ಇಂಡೋನೇಷಿಯಾದ ಸರದಿ.
ಜಕಾರ್ತಾ[ಸೆ.28] ಇಂಡೋನೇಷಿಯಾದ ಸುಲಾವೆಸಿ ದ್ವೀಪದಲ್ಲಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದೆ. ಪರಿಣಾಮ ಪಲು ನಗರಕ್ಕೆ ಸುನಾಮಿ ಅಪ್ಪಳಿಸಿದೆ.
ಈಗಾಗಲೆ ಸುನಾಮಿಯ ಹೊಡೆತಕ್ಕೆ ಐವರು ಅಸುನೀಗಿದ್ದಾರೆ. ಸುನಾಮಿಯ ಭೀಕರತೆ ನೋಡಿದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7..5ರಷ್ಟು ದಾಖಲಾಗಿದೆ.
ಸೆಂಟ್ರಲ್ ಸುಲಾವೆಸಿ ಪಟ್ಟಣದಿಂದ ಈಶಾನ್ಯಕ್ಕೆ 56 ಕಿ.ಮೀ ದೂರ, 10 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.ಶುಕ್ರವಾರ ಸಂಭವಿಸಿದ ಎರಡನೇ ಭೂಕಂಪ ಇದಾಗಿದ್ದು ಭೂಕಂಪದಿಂದ ಅನೇಕ ಮನೆಗಳು ಕುಸಿದಿವೆ. ಅಲ್ಲಿನ ಸರಕಾರ ಸಹ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆಗೆದುಕೊಂಡಿದ್ದು ಸದ್ಯಕ್ಕೆ ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ.
