ಗ್ರೀಸ್ (ಜು. 17)  ಕೂದಲೆಳೆ ಅಂತರದದಲ್ಲಿ ಬದುಕಿ ಬಂದರು ಎಂಬ ಮಾತಿಗೆ ಅನ್ವರ್ಥವಾಗಿದೆ ಈ ಘಟನೆ. ಗ್ರೀಸ್ ನ ಸ್ಕ್ಯಾಥೋಸ್ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಇಲ್ಲಿಯ ವಿಮಾನ ನಿಲ್ಧಾಣದ ಕಾರ್ಯಾಚರಣೆಯೇ ಹೀಗೆ

ಪ್ರವಾಸಿಗರ ಬಹು ಸಮೀಪದಲ್ಲಿಯೇ ಹಾರಿಬರುವ ವಿಮಾಣ ಅತಿ ಕಡಿಮೆ ಅಂತರದಲ್ಲಿ ಲ್ಯಾಂಡ್ ಆಗುತ್ತದೆ. ಭೂಮಿಗೆ ಕೆಲವೇ ಅಡಿ ಅಂತರದಲ್ಲಿ ಬಂದಿಳಿಯುವ ವಿಮಾನ ನೋಡುವುದೇ ರೋಚಕ.

ಏರ್‌ಪೋರ್ಟ್ ಲಗೇಜ್ ಕಡಿಮೆ ಮಾಡಲು ಇರವಿನ್ ಉಪಾಯ!

ಗ್ರೀಸ್ ನ ಈ ವಿಮಾನ ನಿಲ್ದಾಣ ಯುರೋಪಿನಲ್ಲಿಯೇ ಅತಿ ಕಡಿಮೆ ಅಂತರದಲ್ಲಿ ವಿಮಾನಗಳು ಇಳಿಯುವುದಕ್ಕೆ ಹೆಸರಾಗಿದೆ. ವಿಮಾನಗಳ ಹಾರಾಟವನ್ನು ಬಹಳ ಹತ್ತಿರದಿಂದ ಕಾಣಬಹುದಾಗಿದ್ದು ಆಗಮಿಸುವ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಮುಗಿಬೀಳುತ್ತಾರೆ. ಬ್ರಿಟಿಷ್ ಏರ್ ಲೈನ್ಸ್ ನ ವಿಮಾನವೊಂದು ಕೆಳಕ್ಕೆ ಇಳಿಯುವಾಗ ನಡೆದ ಘಟಮನೆ ಕ್ಯಾಮರಾಗಳಲ್ಲಿ ಸೆರೆಯಾಗಿದೆ.