ಈ ಪುಣ್ಯಾತ್ಮ ಸಖತ್ ಐಡಿಯಾವೊಂದನ್ನು ಮಾಡಿದ್ದಾನೆ. ಅದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹೈಲೈಟ್ ಆಗಿದ್ದಾನೆ. ಅವನು ಮಾಡಿರುವ ಐಡಿಯಾ ನೀವು ನೋಡ್ಕಂಡು ಬನ್ನಿ.
ಪ್ಯಾರಿಸ್[ಜು. 10] ಗ್ಲಾಸ್ಗೋದ ಜೋಶ್ ಇರವಿನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಅದಕ್ಕೆ ಕಾರಣ ಒಂದು ವಿಡಿಯೋ.
ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ತೂಕ ಅಥವಾ ಲಗೇಜ್ ತೆಗೆದುಕೊಂಡು ಹೋಗದಿರುವುದೇ ಒಂದು ಸಾಹಸ. ಮನೆಯಿಂದ ಏರ್ ಪೋರ್ಟ್‌ಗೆ ಹೊರಡುವಾಗ ತಕ್ಕಡಿ ಮೇಲಿಟ್ಟು ತೂಕ ಮಾಡುವವರು ಇದ್ದಾರೆ ಬಿಡಿ. ಹಾಗಾದರೆ ತೂಕ ಕಡಿಮೆ ಮಾಡಲು ಏನು ಮಾಡಬೇಕು? ಈ ಜೋಶ್ ಇರವಿನ್ ಐಡಿಯಾ ನೋಡಿ..
ಹೆಚ್ಚುವರಿ ಲಗೇಜ್ ಮೈಮೇಲಿದ್ದರೆ ತೊಂದರೆ ಇಲ್ಲ ತಾನೆ. ಅದೇ ಕಾರಣಕ್ಕೆ ಈತ ಒಂದಾದ ಮೇಲೊಂದರಂತೆ 15 ಶರ್ಟ್ ಗಳನ್ನುಹಾಕಿಕೊಂಡಿದ್ದಾನೆ. ಅದೆ ವಿಡಿಯೋ ವೈರಲ್ ಆಗುತ್ತಿದೆ.
ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿರುವ ಅನೇಕರು ನಾವು ಸಹ ಹೀಗೆ ಮಾಡುತ್ತೇವೆ. ಆದರೆ ಈ ಪುಣ್ಯಾತ್ಮನಷ್ಟು ಅಂಗಿಗಳನ್ನು ಹಾಕಿಕೊಳ್ಳುವುದಿಲ್ಲ ಎಂದಿದ್ದಾರೆ. ಇರವಿನ್ ಸಾಹಸ ನೀವು ಒಮ್ಮೆ ನೋಡಿಕೊಂಡು ಬನ್ನಿ...
