ರಿಯಾದ್(ಜು.15) ವೇದಿಕೆ ಮೇಲೆ ಗಾಯನ ಮಾಡುತ್ತಿದ್ದ ಹಾಡುಗಾರನನ್ನು ತಬ್ಬಿಕೊಂಡ ಮಹಿಳೆಯನ್ನು ಸೌದಿ ಅರೆಬೀಯಾ ಪೊಲೀಸರು ಬಂಧಿಸಿದ್ದಾರೆ.ಸೌದಿಯ ಪ್ರಖ್ಯಾತ ಗಾಯಕ ಮಜೀದ್ ಅಲ್-ಮೊಹಾಂದೀಸ್ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ವೇದಿಕೆಗೆ ನುಗ್ಗಿದ ಮಹಿಳೆ ಅವರನ್ನು ತಬ್ಬಿಕೊಂಡಿದ್ದಾಳೆ.

ಸೌದಿಯಲ್ಲಿ ಮಹಿಳೆಯರು ಮುಕ್ತವಾಗಿ ಬೆರೆಯುವುದಕ್ಕೆ ನಿಷೇಧ ಜಾರಿಯಲ್ಲಿದೆ. ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ಮಾಡಿದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ.

ಈ ಘಟನೆ ಬಗ್ಗೆ ಗಾಯಕ ಮಜೀದ್ ಅಲ್-ಮೊಹಾಂದೀಸ್ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಮಹಿಳೆ ವೇದಿಕೆಗೆ ನುಗ್ಗುತ್ತಿರುವ ವಿಡಿಯೋ ಆನ್ ಲೈನ್ ನಲ್ಲಿ ಹರಿದಾಡುತ್ತಿದೆ. ತಿಂಗಳ ಹಿಂದೆಯಷ್ಟೆ ಸೌದಿಯಲ್ಲಿ ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ಒದಗಿಸಲಾಗಿತ್ತು. ಜಗತ್ತಿನ ಎಲ್ಲ ಕಡೆಗಳಿಂದಲೂ ಸೌದಿ ಅರೇಬಿಯಾದ ಹೊಸ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.