ಎಸ್ಪಿ-ಕಾಂಗ್ರೆಸ್ ಮೈತ್ರಿಯು ಈ ಬಾರಿ ಚುನಾವಣೆಯಲ್ಲಿ ದೊಡ್ಡ ಮಟ್ಟದ ಗೆಲುವನ್ನು ತಂದುಕೊಡಲಿದ್ದು, 403 ಸ್ಥಾನಗಳಲ್ಲಿ 300 ಸ್ಥಾನಗಳನ್ನು ಗೆದ್ದು ಬಹುಮತದೊಂದಿಗೆ ಸರ್ಕಾರ ರಚಿಸಲು ಸಾಧ್ಯವಾಗುವುದು ಎಂದು ಅಖಿಲೇಶ್ ಯಾದವ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಔರಯ್ಯ/ಉತ್ತರ ಪ್ರದೇಶ (ಫೆ.04): ಎಸ್ಪಿ-ಕಾಂಗ್ರೆಸ್ ಮೈತ್ರಿಯು ಈ ಬಾರಿ ಚುನಾವಣೆಯಲ್ಲಿ ದೊಡ್ಡ ಮಟ್ಟದ ಗೆಲುವನ್ನು ತಂದುಕೊಡಲಿದ್ದು, 403 ಸ್ಥಾನಗಳಲ್ಲಿ 300 ಸ್ಥಾನಗಳನ್ನು ಗೆದ್ದು ಬಹುಮತದೊಂದಿಗೆ ಸರ್ಕಾರ ರಚಿಸಲು ಸಾಧ್ಯವಾಗುವುದು ಎಂದು ಅಖಿಲೇಶ್ ಯಾದವ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದು ಕೇವಲ ರಾಜ್ಯದ ಚುನಾವಣೆಯಲ್ಲ. ದೇಶಕ್ಕೆ ಸಂಬಂಧಿಸಿದ ಚುನಾವಣೆ. ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಮ್ಮ ವಿರುದ್ಧ ಪಿತೂರಿ ಮಾಡುವವರನ್ನು ದೂರವಿಟ್ಟು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಅಪ್ಪ-ಮಗನ ಸಂಬಂಧದ ಬಗ್ಗೆ ಮಾತನಾಡುತ್ತಾ, ಸಮಾಜವಾದಿ ಪಕ್ಷ ಯಾವಾಗಲೂ ನೇತಾಜಿ ಜೊತೆಯಿರುತ್ತದೆ. ಪಕ್ಷ ಹಾಗೂ ಮುಲಾಯಂ ಸಿಂಗ್ ನಡುವಿನ ಸಂಬಂಧ ಬದಲಾಗುವುದಿಲ್ಲ. ನಮ್ಮನ್ನು ರಾಜಕೀಯಕ್ಕೆ ತಂದು ತರಬೇತುಗೊಳಿಸಿದವರು ಅವರು. ನಮ್ಮ ಅವರ ನಡುವಿನ ಸಂಬಂಧವನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
