ಹೊಸದಿಲ್ಲಿ: 'ಈಶಾನ್ಯ ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿಯೂ ಬಿಜೆಪಿ ತನ್ನ ಪ್ರಾಬಲ್ಯ ತೋರಿದ್ದು, ತ್ರಿಪುರಾದಲ್ಲಿ ಬಿಜೆಪಿ ಸರಕಾರ ರಚಿಸುವಂತಾಗಿದ್ದು ಕ್ರೂರತನ ಹಾಗೂ ಭಯೋತ್ಪಾದನೆ ವಿರುದ್ಧ ಪ್ರಜಾಪ್ರಭುತ್ವಕ್ಕೆ ಸಂದ ಜಯ,' ಎಂದು ಪ್ರಧಾನಿ ಮೋದಿ ತ್ರಿ ರಾಜ್ಯ ಚುನಾವಣೆ ಫಲಿತಾಂಶಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮೇಘಾಲಯ, ನಾಗಲ್ಯಾಂಡ್ ಮತ್ತು ತ್ರಿಪುರಾ ಜನತೆಗೆ ಟ್ವೀಟ್ ಮೂಲಕ ಧನ್ಯವಾದ ಸಮರ್ಪಿಸಿದ ಮೋದಿ, 'ಉತ್ತಮ ಸರಕಾರ'ವನ್ನು ಜನರು ಬೆಂಬಲಿಸಿದ್ದಾರೆ. ಅಭಿವೃದ್ಧಿಯೆಡೆಗೆ ಬಿಜೆಪಿಗಿರುವ ಕಾಳಜಿಯನ್ನು ಜನರು ಬೆಂಬಲಿಸಿದ್ದಾರೆ. ಜನರ ಬೇಡಿಕೆಗಳನ್ನು ಈಡೇರಿಸಲು ಸರಾರ ಕಂಕಣ ಬದ್ಧವಾಗಿದೆ,' ಎಂದು ಹೇಳಿದ್ದಾರೆ. 

'ತ್ರಿಪುರಾ ಜನತೆ ಬಿಜೆಪಿಗೆ ನೀಡಿರುವ ಅತ್ಯದ್ಭುತ ಬೆಂಬಲಕ್ಕೆ ನಾನು ಚಿರಋಣಿ. ವರ್ಷಾನುಗಟ್ಟಲೆ ತಳಮಟ್ಟದಿಂದ ಕಾರ್ಯನಿರ್ವಹಿಸುತ್ತಿರುವ ಬಿಜೆಪಿ ಕಾರ್ಯಕರ್ತರ ಶ್ರಮಕ್ಕೆ ಧನ್ಯವಾದಗಳು,' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.