Asianet Suvarna News Asianet Suvarna News

ಸಹಾಯಕ ಆಡಳಿತಾಧಿಕಾರಿ ಅಂಕಪ್ಪರಿಂದ ವಿಕ್ಟೋರಿಯಾ ಆಸ್ಪತ್ರೆ ಆಂಬ್ಯುಲೆನ್ಸ್ ದುರ್ಬಳಕೆ

ಬೆಂಗಳೂರು (ಫೆ.11): ನಮಗೆ ಒಂದು ಗಳಿಗೆ ತಡವಾದ್ರು ಪರವಾಗಿಲ್ಲ. ಆದ್ರೆ ಸಾವು-ಬದುಕಿನ ನಡುವೆ ಜಂಜಾಟ ನಡೆಸ್ತಿರೊ ಆ ಜೀವಕ್ಕೆ ಒಳ್ಳೆಯದಾಗಲಿ ಅಂತೀವಿ. ಅದೇ ಕಾರಣಕ್ಕೆ ಮಾರುದ್ದ ಟ್ರಾಫಿಕ್ ಇದ್ದರು, ಆ್ಯಂಬುಲೆನ್ಸ್ ಬರ್ತಿದ್ದಾಗೆ ಎಲ್ಲರೂ ಜಾಗ ಬಿಡ್ತೀವಿ. ಆದ್ರೆ ಜನರ ಈ ಮನಸ್ಥಿತಿಯನ್ನೇ ಸರ್ಕಾರಿ ಅಧಿಕಾರಿಯೊಬ್ಬರು ಬಂಡವಾಳ ಮಾಡ್ಕೊಂಡಿದ್ದಾರೆ. ಟ್ರಾಫಿಕ್ ನಲ್ಲಿ ಕಾಯೋಕ್ ಆಗಲ್ಲ ಅಂತಾ ಆಸ್ಪತ್ರೆ ಆ್ಯಂಬುಲೆನ್ಸ್ ನಲ್ಲೇ ಸ್ವಂತ ಕೆಲಸಕ್ಕೆ ತೆರಳಿದ್ದಾರೆ. ಈ ಮಹತ್ಕಾರ್ಯ ಮಾಡಿದ ಮಹಾನುಭಾವ ಮತ್ಯಾರು ಅಲ್ಲಾ. ಆತ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ಅಂಕಪ್ಪ.

Victoria Hospital Ambulance misuse by staff Ankappa

ಬೆಂಗಳೂರು (ಫೆ.11): ನಮಗೆ ಒಂದು ಗಳಿಗೆ ತಡವಾದ್ರು ಪರವಾಗಿಲ್ಲ. ಆದ್ರೆ ಸಾವು-ಬದುಕಿನ ನಡುವೆ ಜಂಜಾಟ ನಡೆಸ್ತಿರೊ ಆ ಜೀವಕ್ಕೆ ಒಳ್ಳೆಯದಾಗಲಿ ಅಂತೀವಿ. ಅದೇ ಕಾರಣಕ್ಕೆ ಮಾರುದ್ದ ಟ್ರಾಫಿಕ್ ಇದ್ದರು, ಆ್ಯಂಬುಲೆನ್ಸ್ ಬರ್ತಿದ್ದಾಗೆ ಎಲ್ಲರೂ ಜಾಗ ಬಿಡ್ತೀವಿ. ಆದ್ರೆ ಜನರ ಈ ಮನಸ್ಥಿತಿಯನ್ನೇ ಸರ್ಕಾರಿ ಅಧಿಕಾರಿಯೊಬ್ಬರು ಬಂಡವಾಳ ಮಾಡ್ಕೊಂಡಿದ್ದಾರೆ. ಟ್ರಾಫಿಕ್ ನಲ್ಲಿ ಕಾಯೋಕ್ ಆಗಲ್ಲ ಅಂತಾ ಆಸ್ಪತ್ರೆ ಆ್ಯಂಬುಲೆನ್ಸ್ ನಲ್ಲೇ ಸ್ವಂತ ಕೆಲಸಕ್ಕೆ ತೆರಳಿದ್ದಾರೆ. ಈ ಮಹತ್ಕಾರ್ಯ ಮಾಡಿದ ಮಹಾನುಭಾವ ಮತ್ಯಾರು ಅಲ್ಲಾ. ಆತ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ಅಂಕಪ್ಪ.

ಈತ ಆರ್​ಟಿಐ ಅಡಿಯ ವಿಚಾರಣೆಯಲ್ಲಿ ಭಾಗಿಯಾಗಬೇಕಿತ್ತು. ಆದರೆ ತನ್ನ ಸ್ವಂತ ವಾಹನದಲ್ಲಿ ಹೋದರೆ ಎಲ್ಲಿ ತಡವಾಗುತ್ತೋ ಅನ್ನೋ ಕಾರಣಕ್ಕೆ, ಆಸ್ಪತ್ರೆ ಆ್ಯಂಬುಲೆನ್ಸ್ ನಲ್ಲಿ ತೆರಳಿದ್ದಾನೆ. ತಾನು ಮಾಡುತ್ತಿರುವುದು ಕಾನೂನು ಬಾಹಿರ ಕೃತ್ಯ ಅಂತ ಗೊತ್ತಿದ್ದೂ ಕೂಡ ಅಂಕಪ್ಪ ಈ ಕೆಲಸಕ್ಕೆ ಕೈ ಹಾಕಿದ್ದಾನೆ.

ಟ್ರಾಫಿಕ್​ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಆ್ಯಂಬುಲೆನ್ಸ್ ದುರ್ಬಳಕೆ ಮಾಡಿರೋದನ್ನ ವಿರೋಧಿಸಿ, ಆರ್​ಟಿಐ ಕಾರ್ಯಕರ್ತ ಡಿ ಎಸ್ ಗೌಡ ಎಂಬುವವರು ಆರೋಗ್ಯ ಸಚಿವ ರಮೇಶ್ ಕುಮಾರ್​ಗೆ ದೂರು ನೀಡಿದ್ದಾರೆ. ಆದರೆ ಈ ಬಗ್ಗೆ ಖುದ್ದು ಅಂಕಪ್ಪ ಅವರನ್ನೇ ಕೇಳಿದ್ರೆ, ನಾನೂ ಆ ರೀತಿ ಮಾಡೇ ಇಲ್ಲ. ನಂಗೆ ಅದು ಗೊತ್ತೇ ಇಲ್ಲ ಅಂತ ಸಬೂಬು ಹೇಳ್ತಾರೆ.

Follow Us:
Download App:
  • android
  • ios