ನವದೆಹಲಿ (ಸೆ.23): ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಬರೆದಿರುವ 'ಸಿಟಿಜೆನ್ ಅಂಡ್ ಸೊಸೈಟಿ' ಪುಸ್ತಕವನ್ನು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು.

ಉಪರಾಷ್ಟರಪತಿ ಹಮೀದ್ ಅನ್ಸಾರಿ ಬೇರೆ ಬೇರೆ ವಿಚಾರಗಳಿಗೆ ಸಂಬಂಧಿಸಿ ನೀಡಿದ ಉಪನ್ಯಾಸಗಳ ಸಂಗ್ರಹಿಸಿ ಸಿಟಿಜೆನ್ ಅಂಡ್ ಸೊಸೈಟಿ ಪುಸ್ತಕವನ್ನು ಹೊರತಂದಿದ್ದಾರೆ. ಇವರ ಬರವಣಿಗೆಯನ್ನು ರಾಷ್ಟ್ರಪತಿಯವರು ಶ್ಲಾಘಿಸುತ್ತಾ ನನಗೆ ಅನ್ಸಾರಿಯವರು ಬಹಳ ವರ್ಷಗಳಿಂದ ಗೊತ್ತು. ಕೇವಲ ಉಪರಾಷ್ಟ್ರಪತಿಯಾಗಿ ಮಾತ್ರವಲ್ಲ ಜೊತೆಗೆ ವಿದ್ವಾಂಸರು ಹೌದು ಎಂದಿದ್ದಾರೆ.