ಮಹಿಳೆ ಬ್ಯಾಗ್‌ನಲ್ಲಿ ಅದನ್ನು ಕಂಡು ಹೌಹಾರಿದ ಪೊಲೀಸರು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 5:01 PM IST
Vibrator in luggage sparks bomb scare, shuts down Berlin airport
Highlights

ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ಸಾಮಾನ್ಯ. ಬ್ಯಾಗ್ ಮತ್ತು ಇತರೆ ವಸ್ತುಗಳನ್ನು ಹದ್ದಿನ ಕಣ್ಣಿಟ್ಟಿರುತ್ತಾರೆ. ಆದರೆ ಮಹಿಳೆಯೊಬ್ಬರ ಬ್ಯಾಗ್ ಚೆಕ್ ಮಾಡಿದ ಬರ್ಲಿನ್ ಪೊಲೀಸರೇ ಬೇಸ್ತು ಬಿದ್ದಿದ್ದಾರೆ.

ಬರ್ಲಿನ್ (ಆ.8) ಭದ್ರತಾ ಪಡೆ ಪೊಲೀಸರು ಮಹಿಳೆಯೊಬ್ಬರ ಬ್ಯಾಗ್ ಪರಿಶೀಲನೆ ಮಾಡಿದಾಗ ಹೌಹಾರಿದ್ದಾರೆ. ತಕ್ಷಣಕ್ಕೆ ಅವರಿಗೆ ಅದು ಏನೆಂದು ಗೊತ್ತಾಗಿಲ್ಲ. ಬಾಂಬ್ ಇರಬಹುದು ಎಂದು ಭಯಗೊಂಡಿದ್ದಾರೆ. ತಕ್ಷಣಕ್ಕೆ ವಿಮಾನ ನಿಲ್ದಾಣವನ್ನು ಬಂದ್ ಮಾಡಿ ಸ್ಥಳಾಂತರ ಮಾಡುವ ನಿರ್ಧಾರವನ್ನು ಮಾಡಿದ್ದಾರೆ.

ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಮಹಿಳೆ ಬ್ಯಾಗ್ ನಲ್ಲಿ ಸಿಕ್ಕಿದ್ದು ಒಂದು ಸೆಕ್ಸ್ ಟಾಯ್ ಅಥವಾ ವೈಬ್ರೇಟರ್ ಎಂಬುದು ಗೊತ್ತಾಗಿದೆ. ಇದಾದ ನಂತರ ಸ್ಥಳಕ್ಕೆ ಬಂದ್ ಬಾಂಬ್ ಸ್ಕಾಡ್ ಸಹ ಹಿಂದಿರುಗಿದೆ. ವಿಮಾನ ತಪ್ಪಿಸಿಕೊಂಡು ಪರದಾಡುತ್ತಿದ್ದ ಮಹಿಳೆಯನ್ನು ಮತ್ತೊಂದು ವಿಮಾನ ಹತ್ತಿಸಿ ಕಳಿಸಲಾಗಿದೆ.

ಮೈಕ್ರೋಫೋನ್ ಎಡವಟ್ಟು, ಜಾರಿದ ಟಿವಿ ನಿರೂಪಕಿಯ ಮೇಲುಡುಪು

ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿದ ಮಹಿಳೆ ಪೊಲೀಸರು ನಾನು ಎಷ್ಟು ಕೇಳಿಕೊಂಡರು ನಂಬಲಿಲ್ಲ ಎಂದು ಆರೋಪಿಸಿದ್ದಾರೆ.

 

loader