ಡ್ರೈವರ್ ಮುಸ್ಲಿಂ ಎಂಬ ಕಾರಣಕ್ಕೆ ಕ್ಯಾಬ್ ಕ್ಯಾನ್ಸಲ್ ಮಾಡಿದ ವಿಎಚ್’ಪಿ ಮುಖಂಡ

VHP man turns down cab as driver is Muslim triggers row
Highlights

ಉತ್ತರ ಪ್ರದೇಶದ ವಿಶ್ವ ಹಿಂದೂ ಪರಿಷತ್ ಸಾಮಾಜಿಕ ಜಾಲತಾಣ ನಿರ್ವಾಹಕ  ಇದೀಗ ವಿವಾದವೊಂದಕ್ಕೆ ಕಾರಣವಾಗಿದ್ದಾರೆ.

 ಲಕ್ನೋ : ಉತ್ತರ ಪ್ರದೇಶದ ವಿಶ್ವ ಹಿಂದೂ ಪರಿಷತ್ ಸಾಮಾಜಿಕ ಜಾಲತಾಣ ನಿರ್ವಾಹಕ  ಇದೀಗ ವಿವಾದವೊಂದಕ್ಕೆ ಕಾರಣವಾಗಿದ್ದಾರೆ.

ಪ್ರಯಾಣಕ್ಕಾಗಿ ಓಲಾ ಕ್ಯಾಬ್ ಬುಕ್ ಮಾಡಿದ್ದ ಅಭಿಷೇಕ್ ಮಿಶ್ರಾ ಚಾಲಕ ಮುಸ್ಲಿಂ ಎನ್ನುವ ಕಾರಣಕ್ಕೆ ಕ್ಯಾಬ್ ರದ್ದು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ಅಭಿಷೇಕ್ ಟ್ವೀಟ್ ಮಾಡಿ ಮುಸ್ಲಿಂ ಚಾಲಕನಾದ್ದರಿಂದಲೇ ಕ್ಯಾಬ್ ಕ್ಯಾನ್ಸಲ್ ಮಾಡಿದ್ದಾಗಿ ಬರೆದುಕೊಂಡಿದ್ದಾರೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಅಲ್ಲದೇ ತಾನು ಜಿಹಾದಿಗಳಿಗೆ ಎಂದಿಗೂ ತನ್ನ ಹಣವನ್ನು ನೀಡುವುದಿಲ್ಲ ಎಂದೂ ಕೂಡ ಅವರು ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಪ್ರತಿಯಾಗಿ ಟ್ವೀಟ್ ಮಾಡಿರುವ ಓಲಾ ಕಂಪನಿಯು ಇಂತಹ ವ್ಯಕ್ತಿತ್ವವನ್ನೂ ಎಂದಿಗೂ ಕೂಡ ಬೆಂಬಲಿಸುವುದಿಲ್ಲ. ನಮ್ಮದು ಸರ್ವಧರ್ಮ ಸಮನ್ವಯ ರಾಷ್ಟ್ರ ಎಂದು ಹೇಳಿದೆ.

 

loader