ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಯೋಜನೆಗೆ ಮತ್ತೆ ಚಾಲನೆ ನೀಡಿರುವ ವಿಶ್ವ ಹಿಂದೂ ಪರಿಷತ್‌, ಇದೀಗ ಮಂದಿರ ನಿರ್ಮಾಣಕ್ಕೆ ಅಗತ್ಯವಾದ ಕಲ್ಲುಗಳನ್ನು ಸ್ಥಳಕ್ಕೆ ತರಿಸಿಕೊಳ್ಳುವ ಕೆಲಸ ಆರಂಭಿಸಿದೆ. ಇದರ ಮೊದಲ ಹಂತವಾಗಿ ರಾಜಸ್ಥಾನದಿಂದ 2 ಲಾರಿಗಳಷ್ಟುಕಲ್ಲು ಸೋಮವಾರ ಅಯೋಧ್ಯೆಗೆ ಬಂದಿದೆ. ಮಂದಿರ ನಿರ್ಮಾಣಕ್ಕೆ ಒಟ್ಟಾರೆ 100 ಲಾರಿ ಕಲ್ಲು ಬೇಕೆಂದು ಅಂದಾಜಿಸಲಾಗಿದೆ.
ಇದರ ಮೊದಲ ಹಂತವಾಗಿ ರಾಜಸ್ಥಾನದಿಂದ 2 ಲಾರಿಗಳಷ್ಟುಕಲ್ಲು ಸೋಮವಾರ ಅಯೋಧ್ಯೆಗೆ ಬಂದಿದೆ. ಮಂದಿರ ನಿರ್ಮಾಣಕ್ಕೆ ಒಟ್ಟಾರೆ 100 ಲಾರಿ ಕಲ್ಲು ಬೇಕೆಂದು ಅಂದಾಜಿಸಲಾಗಿದೆ.
ಹಂತಹಂತವಾಗಿ ಇಷ್ಟುಕಲ್ಲುಗಳನ್ನು ನಗರದ ವಿವಿಧ ಸ್ಥಳಗಳಲ್ಲಿ ಶೇಖರಿಸಿ ಇನ್ನೊಂದು ವರ್ಷದಲ್ಲಿ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ವಿಎಚ್ಪಿ ಹಿರಿಯ ನಾಯಕ ತ್ರಿಲೋಕಿ ನಾಥ್ ತಿಳಿಸಿದ್ದಾರೆ.
2015ರಲ್ಲೂ ಕೂಡಾ ವಿಎಚ್ಪಿ ರಾಜಸ್ಥಾನದಿಂದ ಹೀಗೆ ಕಲ್ಲು ತರಿಸುವ ಕೆಲಸ ಆರಂಭಿಸಿತ್ತು. ಆದರೆ 2 ಲಾರಿ ಕಲ್ಲು ಬರುತ್ತಲೇ ಎಚ್ಚೆತ್ತುಕೊಂಡಿದ್ದ ಅಂದಿನ ಅಖಿಲೇಶ್ ಸರ್ಕಾರ, ವಾಣಿಜ್ಯ ತೆರಿಗೆ ಇಲಾಖೆ ಮೂಲಕ ಅದಕ್ಕೆ ತಡೆ ಒಡ್ಡಿತ್ತು.
ಆದರೆ ಇದೀಗ ಯೋಗಿ ಸರ್ಕಾರ ಬರುತ್ತಲೇ, ವಾಣಿಜ್ಯ ತೆರಿಗೆ ಇಲಾಖೆ ಕಲ್ಲು ತರಿಸಲು ಅಗತ್ಯ ಪರವಾನಗಿ ನೀಡುವ ಮೂಲಕ ವಿಎಚ್ಪಿ ಕೆಲಸವನ್ನು ಸರಾಗಗೊಳಿಸಿದೆ.
