ಎಸಿಬಿ ಬಲೆಗೆ ಸಿಕ್ಕ ಭ್ರಷ್ಟ ವೈದ್ಯ ಲಂಚದ ಹಣವನ್ನೇ ನುಂಗಿ ಪೇರಿ ಕಿತ್ತ

First Published 17, Mar 2018, 5:40 PM IST
Veterinary doctor swallows Rs 2000 note to foil ACB trap
Highlights

ಲಂಚಕೋರನನ್ನು ಬಂಧನಕ್ಕೆ ಬೀಳಿಸಬೇಕೆಂದು ವ್ಯಕ್ತಿಯೊಬ್ಬನ ಕೈಯಲ್ಲಿ 2 ಸಾವಿರ ರೂ. ಕೊಟ್ಟು ಅದಕ್ಕೆ ರಸಾಯನಿಕ ಸಿಂಪಡಿಸಿ ಕಳಿಸಿದ್ದಾರೆ

ಅಹಮದಾಬಾದ್(ಮಾ.17): ಭ್ರಷ್ಟರು ಗೌಪ್ಯ ಜಾಗಗಳಲ್ಲಿ ಹಣವನ್ನು ಬಚ್ಚಿಟ್ಟು ಸಿಕ್ಕಿ ಬೀಳುವುದು ಸಾಮಾನ್ಯ ವಿಷಯ. ಆದರೆ ಇಲ್ಲೊಬ್ಬ ಭ್ರಷ್ಟ ವೈದ್ಯ ತಾನು ಸಿಕ್ಕಿ ಬೀಳಬಾರದೆಂದು ಲಂಚ ಪಡೆದ ಹಣವನ್ನೆ ನುಂಗಿ ಪೇರಿ ಕಿತ್ತ ಘಟನೆ  ಅಹಮದಾಬಾದ್'ನ ಪಠಾನ್ ನಗರದಲ್ಲಿ ನಡೆದಿದೆ.

ಈತ ಎರಡನೆ ದರ್ಜೆ ಪಶು ವೈದ್ಯ  ಹಣಕ್ಕಾಗಿ ಹಲವರನ್ನು ಪೀಡಿಸುತ್ತಿದ್ದ.  ಪುಣ್ಮಾತ್ಮನ ಲಂಚದ ಮಹಿಮೆ ಭ್ರಷ್ಟಚಾರ ನಿಗ್ರಹ ದಳ ಅಧಿಕಾರಿಗಳಿಗೆ ಗೊತ್ತಾಗಿದೆ. ಲಂಚಕೋರನನ್ನು ಬಂಧನಕ್ಕೆ ಬೀಳಿಸಬೇಕೆಂದು ವ್ಯಕ್ತಿಯೊಬ್ಬನ ಕೈಯಲ್ಲಿ 2 ಸಾವಿರ ರೂ. ಕೊಟ್ಟು ಅದಕ್ಕೆ ರಸಾಯನಿಕ ಸಿಂಪಡಿಸಿ ಕಳಿಸಿದ್ದಾರೆ. ಪುಣ್ಯಾತ್ಮನಿಗೆ ಅಧಿಕಾರಿಗಳು ತನ್ನನ್ನು ಸಿಕ್ಕಿಬೀಳಿಸಿವುದು ಗೊತ್ತಾಗಿದೆ.

ಅಧಿಕಾರಿಗಳು ಬರುವುದನ್ನು ಗಮನಿಸಿ ಲಂಚ ಪಡೆದ ನೋಟನ್ನೇ ನುಂಗಿ ಪೇರಿ ಕಿತ್ತ. ಛಲ ಬಿಡದ ಅಧಿಕಾರಿಗಳು ಈತನ ಹಿಂದೆಯೇ ಓಡಿ ಹಿಡಿದಿದ್ದಾರೆ. ತನಿಖೆ ಮುಂದುವರಿಸಲು ಪಡೆದ ನೋಟು ಮುಖ್ಯವಾಗಿ ಬೇಕಾಗುತ್ತದೆ. ನೋಟನ್ನು ವೈದ್ಯರ ಸಹಾಯದಿಂದ ಹೊಟ್ಟೆಯೊಳಗಿಂದ ತೆಗೆಸಿ ತನಿಖೆ ಮುಂದುವರಿಸಿದ್ದಾರೆ.

loader