ತೂಕ ಕಡಿಮೆ ಮಾಡಿ: ರೇಣುಕಾಗೆ ವೆಂಕಯ್ಯ ಟಾಂಗ್‌!

First Published 30, Mar 2018, 7:57 AM IST
Venkaiah Naidu tells Congress MP Renuka Chowdhury to lose weight
Highlights

ರಾಜ್ಯಸಭಾ ಕಾಲಾವಧಿ ಪೂರ್ಣಗೊಳಿಸಿದ ಸದಸ್ಯರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕಾಂಗ್ರೆಸ್‌ ಸಂಸದೆ ರೇಣುಕಾ ಚೌಧರಿ ಅವರಿಗೆ ತೂಕ ಕಡಿಮೆ ಮಾಡುಕೊಳ್ಳುವಂತೆ ಸಲಹೆ ನೀಡಿ ಟಾಂಗ್‌ ನೀಡಿದರು.

ನವದೆಹಲಿ: ರಾಜ್ಯಸಭಾ ಕಾಲಾವಧಿ ಪೂರ್ಣಗೊಳಿಸಿದ ಸದಸ್ಯರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕಾಂಗ್ರೆಸ್‌ ಸಂಸದೆ ರೇಣುಕಾ ಚೌಧರಿ ಅವರಿಗೆ ತೂಕ ಕಡಿಮೆ ಮಾಡುಕೊಳ್ಳುವಂತೆ ಸಲಹೆ ನೀಡಿ ಟಾಂಗ್‌ ನೀಡಿದರು.

ವಿದಾಯ ಭಾಷಣ ಮಾಡಿದ 63ರ ಹರೆಯದ ರೇಣುಕಾ ಚೌಧರಿ, ‘ ನಾನಿಷ್ಟುದಪ್ಪ ಆಗುವುದಕ್ಕಿಂತ ಮುನ್ನವೇ ವೆಂಕಯ್ಯ ನಾಯ್ಡು ಅವರಿಗೆ ನನ್ನ ಪರಿಚಯವಿದೆ. ನನ್ನ ದೇಹದ ತೂಕ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿ, ದೇಹದ ತೂಕ ಕಡಿಮೆ ಮಾಡಿಕೊಳ್ಳಿ ಎಂದು ಹೇಳುತ್ತಾರೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನಾಯ್ಡು, ‘ನೀವು ನಿಮ್ಮ ದೇಹದ ತೂಕ ಕಡಿಮೆ ಮಾಡಿ ಹಾಗೇ ಪಕ್ಷದ ತೂಕ ಹೆಚ್ಚಿಸಲು ಗಮನಹರಿಸಿ ಎಂಬುದು ನನ್ನ ಸಲಹೆ’ ಎಂದು ಹೇಳಿದರು. ನಾಯ್ಡು ಅವರ ಈ ಸಲಹೆಗೆ ಉತ್ತರಿಸಿದ ಚೌಧರಿ ‘ಕಾಂಗ್ರೆಸ್‌ಗೆ ಏನೂ ಸಮಸ್ಯೆ ಇಲ್ಲ’ ಎಂದಿದ್ದು, ಇಬ್ಬರ ನಡುವಿನ ಈ ಸಂಭಾಷಣೆ ಕೇಳಿ ಸಭೆ ನಗೆಗಡಲಲ್ಲಿ ತೇಲಿತು.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರೇಣುಕಾರನ್ನು ಶೂರ್ಪನಖಿಗೆ ಹೋಲಿಸಿದ್ದು ವಿವಾದಕ್ಕೀಡಾಗಿತ್ತು.

loader