ರೈತರ ಸಾಲ ಮನ್ನಾ ಒಂದು ರೀತಿ ಫ್ಯಾಷನ್‌ ಆಗುತ್ತಿದೆ' ಎಂಬ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿಕೆಗೆ ರಾಜ್ಯದಲ್ಲಿ ತೀವ್ರ ಆಕ್ರೋಶ, ಆಕ್ಷೇಪ ವ್ಯಕ್ತವಾಗಿದೆ.
ವೆಂಕಯ್ಯ ನಾಯ್ಡು ಅವರ ಮನೆ ಮುಂದೆ ಬ್ಯಾಂಕ್ನವರು ತಮಟೆ ಬಾರಿಸಿದ್ದರೆ, ಅವರ ಬಾಯಿಂದ ಆ ಮಾತು ಬರುತ್ತಿರಲಿಲ್ಲ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಕೋಲಾರದಲ್ಲಿ ವ್ಯಂಗ್ಯವಾಡಿದ್ದಾರೆ.
ಇನ್ನು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಉತ್ತರಪ್ರದೇಶ, ಮಹಾರಾ ಷ್ಟ್ರಗಳಲ್ಲಿ ಬಿಜೆಪಿ ಸರ್ಕಾರ ಸಾಲ ಮನ್ನಾ ಮಾಡಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಯ್ಡು ಹೇಳಿಕೆ ಸಂಕಷ್ಟದಲ್ಲಿರುವ ಬಡ ರೈತರಿಗೆ ಮಾಡಿರುವ ಅವಮಾನ ಎಂದು ಕೃಷ್ಣ ಭೈರೆಗೌಡ ಟೀಕಿಸಿದ್ದಾರೆ. ರೈತ ಸಂಘದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟಿಸಿದ್ದಾರೆ.
