ಬಿಜೆಪಿ ಟಾಪ್ ಲೀಡರ್'ಗಳ ಸಭೆಯಲ್ಲಿ ಆಂಧ್ರ ಮೂಲದ ವೆಂಕಯ್ಯ ನಾಯ್ಡು ಅವರ ಹೆಸರು ಪ್ರಸ್ತಾಪವಾದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಸಿಕ್ಕಿದೆ. ರಾಷ್ಟ್ರಪತಿ ಆಯ್ಕೆಯಲ್ಲಿ ಟಿಆರ್'ಎಸ್, ವೈಎಸ್ಸಾರ್ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಪಕ್ಷಗಳ ಬೆಂಬಲ ಬಹಳ ಮುಖ್ಯವಾದುದು. ವೆಂಕಯ್ಯ ನಾಯ್ಡು ಅಭ್ಯರ್ಥಿಯಾದರೆ ಈ ಮೂರು ಪಕ್ಷಗಳು ವಿರೋಧಿಸುವುದಿಲ್ಲವೆಂಬ ಯೋಜನೆ ಬಿಜೆಪಿಯದ್ದು. ಹೀಗಾಗಿ, ವೆಂಕಯ್ಯ ನಾಯ್ಡು ಅವರನ್ನು ರಾಷ್ಟ್ರಪತಿ ಹುದ್ದೆಗೆ ಎನ್'ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರು(ಮೇ 25): ಕೇಂದ್ರ ವಸತಿ ಮತ್ತು ಐಟಿ ಸಚಿವ ವೆಂಕಯ್ಯ ನಾಯ್ಡು ಭಾರತದ ಮುಂದಿನ ರಾಷ್ಟ್ರಪತಿ ಆಗಲಿದ್ದಾರೆ ಎಂಬ ಮಾಹಿತಿ ಸುವರ್ಣನ್ಯೂಸ್'ಗೆ ಬಿಜೆಪಿ ಮೂಲಗಳಿಂದ ಸಿಕ್ಕಿದೆ. ದಕ್ಷಿಣ ಭಾರತದವರಿಗೇ ಈ ಬಾರಿ ರಾಷ್ಟ್ರಪತಿ ಹುದ್ದೆ ಕೊಡಬೇಕೆಂಬ ಚಿಂತನೆ ಬಿಜೆಪಿ ವಲಯದಲ್ಲಿ ಕೆಲ ದಿನಗಳಿಂದ ಕೇಳುತ್ತಾ ಬಂದಿತ್ತು. ದಕ್ಷಿಣ ಭಾರತದಲ್ಲಿ ಬಿಜೆಪಿ ವರ್ಚಸ್ಸನ್ನು ಹೆಚ್ಚಿಸುವುದು ಬಿಜೆಪಿ ಉದ್ದೇಶ.
ಬಿಜೆಪಿ ಟಾಪ್ ಲೀಡರ್'ಗಳ ಸಭೆಯಲ್ಲಿ ಆಂಧ್ರ ಮೂಲದ ವೆಂಕಯ್ಯ ನಾಯ್ಡು ಅವರ ಹೆಸರು ಪ್ರಸ್ತಾಪವಾದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಸಿಕ್ಕಿದೆ. ರಾಷ್ಟ್ರಪತಿ ಆಯ್ಕೆಯಲ್ಲಿ ಟಿಆರ್'ಎಸ್, ವೈಎಸ್ಸಾರ್ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಪಕ್ಷಗಳ ಬೆಂಬಲ ಬಹಳ ಮುಖ್ಯವಾದುದು. ವೆಂಕಯ್ಯ ನಾಯ್ಡು ಅಭ್ಯರ್ಥಿಯಾದರೆ ಈ ಮೂರು ಪಕ್ಷಗಳು ವಿರೋಧಿಸುವುದಿಲ್ಲವೆಂಬ ಯೋಜನೆ ಬಿಜೆಪಿಯದ್ದು. ಹೀಗಾಗಿ, ವೆಂಕಯ್ಯ ನಾಯ್ಡು ಅವರನ್ನು ರಾಷ್ಟ್ರಪತಿ ಹುದ್ದೆಗೆ ಎನ್'ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ವೆಂಕಯ್ಯ ನಾಯ್ಡು ಟೈಮ್'ಲೈನ್:
* 1949, ಜುಲೈ 1ರಂದು ಜನನ
* ಅವಿಭಜಿತ ಆಂಧ್ರದ ನೆಲ್ಲೂರ್ ಜಿಲ್ಲೆಯ ಚವಟಪಲೇಂನಲ್ಲಿ ಜನ್ಮ
* ವಿದ್ಯಾಭ್ಯಾಸ: ಬಿಎ ಮತ್ತು ಎಲ್'ಎಲ್'ಬಿ
* ಚಿಕ್ಕಂದಿನಿಂದಲೇ ಆರೆಸ್ಸೆಸ್ ಸ್ವಯಂಸೇವಕರು
* ಕಾಲೇಜು ದಿನಗಳಲ್ಲಿ ಎಬಿವಿಪಿ ಸಂಘಟನೆ ಸೇರ್ಪಡೆ
* ಆಂಧ್ರ ವಿವಿಯ ಕಾಲೇಜು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆ
* 1972ರಲ್ಲಿ ಆಂಧ್ರದಲ್ಲಿ ಜೋರು ಸದ್ದು ಮಾಡಿದ್ದ ಕಾಕನಿ ವೆಂಕಟರತ್ನಂ ನೇತೃತ್ವದಲ್ಲಿ "ಜೈ ಆಂಧ್ರ" ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿ
* 1974ರಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಡಲೆಂದು ತಯಾರಾದ ಜಯಪ್ರಕಾಶ್ ನಾರಾಯಣ್ ಛಾತ್ರಾ ಸಂಘರ್ಷ್ ಸಮಿತಿಯ ಸಂಚಾಲಕರಾಗಿ ಕಾರ್ಯ.
* 1977ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಜೈಲು ಸೇರ್ಪಡೆ
* 1978ರಲ್ಲಿ ವಿದ್ಯಾರ್ಥಿ ಮುಖಂಡನಿಂದ ಪೂರ್ಣಪ್ರಮಾಣದ ರಾಜಕೀಯ ಕ್ಷೇತ್ರಕ್ಕೆ ದಾಪುಗಾಲು; ಉದಯಗಿರಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಎದುರಿಸಿ ಮೊದಲ ಬಾರಿ ಶಾಸಕರಾಗಿ ಆಯ್ಕೆ
* 1983ರಲ್ಲಿ ಉದಯಗಿರಿ ಕ್ಷೇತ್ರದಿಂದಲೇ ಸತತ 2ನೇ ಬಾರಿ ಶಾಸಕರಾಗಿ ಆಯ್ಕೆ
* 1988-93ರಲ್ಲಿ ಆಂಧ್ರಪ್ರದೇಶ ಬಿಜೆಪಿಯ ಅಧ್ಯಕ್ಷರು
* 1996-2000ದಿಂದ ಬಿಜೆಪಿ ರಾಷ್ಟ್ರೀಯ ವಕ್ತಾರರು
* 1999ರಲ್ಲಿ ವಾಜಪೇಯಿ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ
* 2002ರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು