ಮುಸ್ಲಿಮರು ವಿಚ್ಛೇದನ ವ್ಯವಸ್ಥೆಯಾದ ತ್ರಿವಳಿ ತಲಾಖ್‌ ರದ್ದು ಮಾಡಲು ಮುಂದಾಗಬೇಕು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕರೆಕೊಟ್ಟಿದ್ದಾರೆ

ಅಹ್ಮದಾಬಾದ್‌: ಹಿಂದೂ ಧರ್ಮದಲ್ಲಿದ್ದ ಸಾಮಾಜಿಕ ಪಿಡುಗುಗಳಾದ ಸತಿ ಸಹಗಮನ ಪದ್ಧತಿ, ವರದಕ್ಷಿಣೆ, ಬಾಲ್ಯ ವಿವಾಹಗಳನ್ನು ರದ್ದು ಮಾಡಿದ ರೀತಿಯಲ್ಲೇ, ಮುಸ್ಲಿಮರು ವಿಚ್ಛೇದನ ವ್ಯವಸ್ಥೆಯಾದ ತ್ರಿವಳಿ ತಲಾಖ್‌ ರದ್ದು ಮಾಡಲು ಮುಂದಾಗಬೇಕು ಎಂದು ಕೇಂದ್ರ ಸಚಿವ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ. ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಪರಾಷ್ಟ್ರಪತಿ ಪತ್ನಿ ವಿರೋಧ: 3 ಬಾರಿ ತಲಾಖ್‌ ಹೇಳಿದರೆ ಅದು ತಲಾಖ್‌ ಎನ್ನಿಸಿಕೊಳ್ಳದು. ಮೌಲ್ವಿಗಳ ಮಾತು ಕೇಳದೇ ಮುಸ್ಲಿಂ ಮಹಿಳೆಯರು ಕುರಾನ್‌ನಲ್ಲಿ ಏನಿದೆ ಎಂಬುದನ್ನು ಓದಿ ತಿಳಿದುಕೊಳ್ಳಬೇಕು ಎಂದು ಉಪರಾಷ್ಟ್ರಪತಿಗಳ ಪತ್ನಿ ಸಲ್ಮಾ ಅನ್ಸಾರಿ ದಿಲ್ಲಿಯಲ್ಲಿ ಹೇಳಿದ್ದಾರೆ.