ಇಂದು ಕಾವೇರಿ ತೀರ್ಪು : ಮುನ್ನೆಚ್ಚರಿಕಾ ಕ್ರಮವಾಗಿ ಸಂಚಾರ ಸ್ಥಗಿತ

First Published 16, Feb 2018, 9:22 AM IST
Vehicle Movement Stops  Between Karnataka And Tamilnadu
Highlights

ಇಂದು ಸುಪ್ರೀಂಕೋರ್ಟ್’ನಲ್ಲಿ ಕಾವೇರಿ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಸಾರಿಗೆ ಬಸ್’ಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಬೆಂಗಳೂರು : ಇಂದು ಸುಪ್ರೀಂಕೋರ್ಟ್’ನಲ್ಲಿ ಕಾವೇರಿ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಸಾರಿಗೆ ಬಸ್’ಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಮೈಸೂರು ಹಾಗೂ ಚಾಮರಾಜನಗರ ಸುತ್ತಮುತ್ತಲಿನ ಜಿಲ್ಲೆಗಳಿಂದ ತಮಿಳುನಾಡಿಗೆ ತೆರಳುವ ಕೆಎಸ್’ಆರ್’ಟಿಸಿ ಬಸ್’ಗಳ ಸಂಚಾರ ಸ್ಥಗಿತವಾಗಿದೆ.

ಆದರೆ ಇಲ್ಲಿಂದ ಕರ್ನಾಟಕದ ಗಡಿ ಭಾಗದವರೆಗೆ ಮಾತ್ರಗಳು ಬಸ್’ಗಳು ಸಂಚಾರ ಮಾಡುತ್ತಿವೆ. ಅಲ್ಲದೇ ತಮಿಳುನಾಡು ಬಸ್’ಗಳ ರಾಜ್ಯ ಪ್ರವೇಶ ಕೂಡ ಸ್ಥಗಿತವಾಗಿದೆ. ಎರಡೂ ಸಂಸ್ಥೆಗಳ ಬಸ್’ಗಳು ರಾಜ್ಯದ ಗಡಿವರೆಗೆ ಸಂಚಾರ ಮಾಡುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾರಿಗೆ ಸಂಸ್ಥೆಯು ಈ ಕ್ರಮವನ್ನು ಕೈಗೊಂಡಿದೆ.

loader