ಲಕ್ನೋ[ಸೆ.30]: ಭಾರತೀಯ ಜನತಾ ಪಕ್ಷದ ಉತ್ತರ ಪ್ರದೇಶದ 13 ಕ್ಷೇತ್ರಗಳಿಗೆ ನಡೆಯಲಿರುವ ವಿಧಾನಸಭಾ ಉಪ ಚುನಾವಣೆಗೆ ಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಈ ಪಟ್ಟಿಯಲ್ಲಿ ಪಕ್ಷವು ತರಕಾರಿ ವ್ಯಾಪಾರಿಯ ಮಗನಿಗೆ ಟಿಕೆಟ್ ನೀಡುವ ಮೂಲಕ ಹೊಸ ನಿದರ್ಶನ ನೀಡಿದೆ.

ಬಿಜೆಪಿಯು ಉತ್ತರ ಪ್ರದೇಶದ ಘೋಸಿ ವಿಧಾನಸಭಾ ಕ್ಷೇತ್ರದಿಂದ ವಿಜಯ್ ರಾಜ್ಭರ್ ನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇನ್ನು ವಿಜಯ್ ರಾಜ್ಭರ್ ಓರ್ವ ತರಕಾರಿ ವ್ಯಾಪಾರಿಯ ಮಗ ಎಂಬುವುದು ಉ್ಲಲೇಖನೀಯ. ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ತನ್ನ ಹೆಸರು ನೋಡಿದ ವಿಜಯ್ 'ಪಕ್ಷ ನನಗೆ ಮಹತ್ವದ ಜವಾಬ್ದಾರಿ ವಹಿಸಿದೆ. ನನ್ನ ತಂದೆ ಮುಂಶೀಪುರ ಬಳಿ ಬೀದಿಬದಿಯಲ್ಲಿ ತರಕಾರಿ ಮಾರುತ್ತಾರೆ. ನಾನು ಪಕ್ಷದ ನಾಯಕರು ನನ್ನ ಮೇಲಿಟ್ಟಿರುವ ನಿರೀಕ್ಷೆಗಳನ್ನು ಪೂರ್ಣಗೊಳಿಸಲು ಯತ್ನಿಸುತ್ತೇನೆ' ಎಂದಿದ್ದಾರೆ.

'ಭಾರತದ ಆರ್ಥಿಕತೆ ಕುಸಿಯಲು ಮೊಘಲರು, ಬ್ರಿಟಿಷರೇ ಕಾರಣ'

ತನ್ನ ಮಗನಿಗೆ ಬಿಜೆಪಿ ಮಹತ್ವದ ಜವಾಬ್ದಾರಿ ವಹಿಸಿರುವ ಕುರಿತು ಪ್ರತಿಕ್ರಿಯಿಸಿರುವ ವಿಜಯ್ ತಂದೆ ನಂದಲಾಲ್ ರಾಜ್ಭರ್ 'ನಾನು ತರಕಾರಿ ಮಾರುತ್ತೇನೆ. ನನ್ನ ಮಗನ ಶ್ರಮ ಫಲ ನೀಡಿದೆ. ಆತ ಸಮರ್ಥನೆಂದು ಪಕ್ಷ ಟಿಕೆಟ್ ನೀಡಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ' ಎಂದಿದ್ದಾರೆ.

17 ರಾಜ್ಯಗಳ 64 ವಿಧಾನಸಭಾ ಕ್ಷೇತ್ರ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಅಕ್ಟೋಬರ್ 21ರಂದು ನಡೆಯಲಿರುವ ಉಪ ಚುನಾವಣೆಗೆ ತಯಾರಿ ನಡೆಸುತ್ತಿದೆ. ಇದರಲ್ಲಿ 32 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. 

‘ಯೋಗಿ ಸಿಎಂ’ ಹಿಂದಿನ ಸೀಕ್ರೆಟ್‌ ಬಹಿರಂಗ!

ಕರ್ನಾಟಕದಲ್ಲಿ ಉಪ ಚುನಾವಣೆ ಯಾವಾಗ?

ನವೆಂಬರ್ 11ರಂದು ಉಪ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಈಗಾಗಲೇ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. 

ಹೊಸ ಉಪ ಚುನಾವಣೆ ವೇಳಾಪಟ್ಟಿ 
ನವೆಂಬರ್ 11 : ನಾಮಪತ್ರ ಸಲ್ಲಿಕೆ ಆರಂಭ
ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನ,
ನವೆಂಬರ್ 19 ನಾಮಪತ್ರಗಳ ಪರಿಶೀಲನೆ
 ನವೆಂಬರ್ 21 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
 ಡಿಸೆಂಬರ್ 5 ಮತದಾನ (7 ಗಂಟೆಯಿಂದ 6)
 ಡಿಸೆಂಬರ್ 9 ಮತ ಎಣಿಕೆ.

ಉಪಚುನಾವಣೆಗೆ ಹೊಸ ದಿನಾಂಕ: ಈ ಎಲೆಕ್ಷನ್ ಕೂಡಾ ನಡೆಯೋದು ಡೌಟು!

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು
1) ಚಿಕ್ಕಬಳ್ಳಾಪುರ 2) ಮಹಾಲಕ್ಷ್ಮಿ ಲೇಔಟ್ 3) ಹೊಸಕೋಟೆ 4) ಹುಣಸೂರು 5) ಗೋಕಾಕ್, 6) ಯಶವಂತಪುರ 7) ಅಥಣಿ 8) ಕಾಗವಾಡ 9)ಶಿವಾಜಿನಗರ 10) ಕೆ.ಆರ್.ಪೇಟೆ 11) ಕೆ.ಆರ್.ಪುರಂ 12) ಹಿರೇಕೆರೂರು 13) ರಾಣೆಬೆನ್ನೂರು 14) ವಿಜಯನಗರ 15) ಯಲ್ಲಾಪುರ