ಕೊಚ್ಚಿ (ಆ. 20): ಪ್ರವಾಹಕ್ಕೆ ತಲ್ಲಣಿಸಿರುವ ಕೇರಳದಲ್ಲಿ ತರಕಾರಿ ಪದಾರ್ಥಗಳ ಕೊರೆಯುಂಟಾದ ಪರಿಣಾಮ ತರಕಾರಿಗಳ ಬೆಲೆಗಳು ಗಗನಕ್ಕೇರಿವೆ.

ಕೊಚ್ಚಿ ಸೇರಿದಂತೆ ಇತರ ಪ್ರಮುಖ ಪ್ರದೇಶಗಳಲ್ಲಿ ಕೆಲವು ತರಕಾರಿ ಅಂಗಡಿಗಳು ಕಾರ್ಯಾರಂಭ ಮಾಡಿದ್ದು, ಇಲ್ಲಿ ಪ್ರತಿ ಕೇಜಿ ಹಸಿ ಮೆಣಸಿನ ಕಾಯಿ 400 ರು.ಗೆ ಮಾರಾಟವಾಗುತ್ತಿದೆ. ಇನ್ನು ಈರುಳ್ಳಿ, ಆಲೂಗಡ್ಡೆ ಹಾಗೂ ಕ್ಯಾಬೇಜ್ ಸೇರಿದಂತೆ ಇತರ ತರಕಾರಿಗಳು ಕೇಜಿಗೆ 90 ರು.ಗೆ ಮಾರಾಟವಾಗುತ್ತಿವೆ. ಹಾಗಾಗಿ, ಸಾರ್ವಜನಿಕರ ಕೋರಿಕೆ ಮೇರೆಗೆ ಪೊಲೀಸರು ಮಧ್ಯಸ್ಥಿಕೆ ವಹಿಸಿದ್ದಾರೆ. ಆದಾಗ್ಯೂ, ಹಸಿ ಮೆಣಸಿನಕಾಯಿ ದರ ಮಾತ್ರ 120ರು.ಗಿಂತ ಕೆಳಗೆ ಇಳಿಯಲಿಲ್ಲ.