ಕಾರ್ಕಳದಿಂದ ಸತತ 6 ಬಾರಿ ಗೆದ್ದಿದ್ದರು ಮೊಯ್ಲಿ

First Published 17, Mar 2018, 11:30 AM IST
Veerappa Moily Won 6 Times
Highlights

ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ರಸ್ತೆ ಗುತ್ತಿಗೆದಾರರ ನಂಟಿನ ಕುರಿತಾದ ಟ್ವೀಟ್ ವಿವಾದ ಕ್ಕೀಡಾಗಿರುವ ಮಾಜಿ ಮುಖ್ಯಮಂತ್ರಿ ಮಾರ್ಪಾಡಿ ವೀರಪ್ಪ ಮೊಯ್ಲಿ (78) ಅವರು ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರ ದಿಂದ 1972ರಿಂದ 1999ರವರೆಗೆ ಸತತ ಆರು ಬಾರಿ ಗೆದ್ದು ಬಂದಿದ್ದರು.

ಬೆಂಗಳೂರು : ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ರಸ್ತೆ ಗುತ್ತಿಗೆದಾರರ ನಂಟಿನ ಕುರಿತಾದ ಟ್ವೀಟ್ ವಿವಾದ ಕ್ಕೀಡಾಗಿರುವ ಮಾಜಿ ಮುಖ್ಯಮಂತ್ರಿ ಮಾರ್ಪಾಡಿ ವೀರಪ್ಪ ಮೊಯ್ಲಿ (78) ಅವರು ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರ ದಿಂದ 1972ರಿಂದ 1999ರವರೆಗೆ ಸತತ ಆರು ಬಾರಿ ಗೆದ್ದು ಬಂದಿದ್ದರು.

ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. 1992ರಿಂದ 1994ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 1999 ಹಾಗೂ 2004ರ ಲೋಕಸಭೆ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಂಡ ಅವರು 2009ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ಮಂತ್ರಿಯಾದರು.

loader