ರಾಜಕೀಯ ಸಂಚು ದೆಹಲಿಯಿಂದ ಬೆಂಗಳೂರಿಗೆ ವ್ಯಾಪಿಸಿದೆ.  ಇದಕ್ಕೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಹೊಣೆ - ಮೊಯ್ಲಿ

ಬೆಂಗಳೂರು(ಸೆ.21): ತಮಿಳುನಾಡಿಗೆ ನೀರು ಬಿಡುವ ಮತ್ತು ಕಾವೇರಿ ನಿರ್ವಹಣಾ ಮಂಡಳಿ ರಚನೆ ಆದೇಶದ ಹಿಂದೆ ಕೇಂದ್ರಸರ್ಕಾರದ ಸಂಚಿದೆ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪಮೊಯ್ಲಿ ಆರೋಪಿಸಿದ್ಧಾರೆ

ಕೇಂದ್ರದ ಕಾನೂನಿನ ಪ್ರತಿನಿಧಿಗಳಾದ ಅಡಿಶಿನಲ್ ಸಾಲಿಸಿಟರ್ ಜನರಲ್ ಅವರು ಮಂಡಳಿ ರಚಿಸುವಂತೆ ಕೇಂದ್ರದ ಪರವಾಗಿ ಸುಪ್ರೀಂಕೋರ್ಟ್`ಗೆ ಮನವಿ ಸಲ್ಲಿಸಿದ್ದಾರೆ. . ಈ ವಿದ್ಯಮಾನಗಳನ್ನ ನೋಡಿದರೆ ಇದರಲ್ಲಿ ರಾಜಕೀಯ ಸಂಚಿದೆ. ಇದರಲ್ಲಿ ರಾಜ್ಯದ ಜನತೆ ಮತ್ತು ರೈತರ ಹಿತಾಸಕ್ತಿಗೆ ವಿರೋಧವಾದ ಸಂಚಿದೆ. ಈ ರಾಜಕೀಯ ಸಂಚು ದೆಹಲಿಯಿಂದ ಬೆಂಗಳೂರಿಗೆ ವ್ಯಾಪಿಸಿದೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರ ಇದಕ್ಕೆ ಹೊಣೆ ಎಂದು ವೀರಪ್ಪಮೊಯ್ಲಿ ಹೇಳಿದ್ದಾರೆ.