ನೂತನ ಬಾವುಟಕ್ಕೆ ವಾಟಾಳ್ ನಾಗರಾಜ್ ವಿರೋಧ

Vatal Nagaraj Slams Karnataka Govt
Highlights

ಕರ್ನಾಟಕದಲ್ಲಿ ನೂತನ ಬಾವುಟಕ್ಕೆ ಅಂಗೀಕಾರ ನೀಡಿದ ವಿಚಾರವಾಗಿ  ಕನ್ನಡಪರ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗಾರಾಜ್ ಸುದ್ದಿಗೋಷ್ಠಿ ನಡೆಸಿದ್ದಾರೆ.

ಬೆಂಗಳೂರು : ಕರ್ನಾಟಕದಲ್ಲಿ ನೂತನ ಬಾವುಟಕ್ಕೆ ಅಂಗೀಕಾರ ನೀಡಿದ ವಿಚಾರವಾಗಿ  ಕನ್ನಡಪರ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗಾರಾಜ್ ಸುದ್ದಿಗೋಷ್ಠಿ ನಡೆಸಿದ್ದಾರೆ.

ಬಾವುಟದ ಇತಿಹಾಸ  ಗೊತ್ತಿಲ್ಲದವರು. ಸರ್ಕಾರಿ ಬಾವುಟ ಮಾಡಲು ಹೊರಟಿದ್ದಾರೆ.  ಹಳದಿ ಕೆಂಪು ಹಾಗೂ ಕರ್ನಾಟಕದ ಮಧ್ಯದಲ್ಲಿ ಪೈರು ಇರುವ ಬಾವುಟವನ್ನು ನಾವು ಮಾಡಿದ್ದೆವು. ಕರ್ನಾಟಕದ ಬಾವುಟಕ್ಕೆ ತುಂಬಾ ಇತಿಹಾಸವಿದೆ.

ನಾನು ಹಾಗೂ ರಾಮಮೂರ್ತಿ  ಸೇರಿ ಬಾವುಟವನ್ನು  ತಯಾರು ಮಾಡಿದ್ದೆವು.  1964ರಲ್ಲಿ ಬರೀ ಹಳದಿ ಹಾಗೂ ಕರ್ನಾಟಕದ ಚಿತ್ರ ಇತ್ತು. 1966ರಲ್ಲಿ ಹಳದಿ ಹಾಗೂ ಕೆಂಪು ಬಣ್ಣದ ಬಾವುಟವನ್ನು ರೆಡಿ ಮಾಡಿದೆವು. ಹಳದಿ ಹಾಗೂ ಕೆಂಪು ಬಾವುಟಕ್ಕೆ ಒಂದು ಶಕ್ತಿ ಬಂದಿತ್ತು. 

ಜನರಲ್ಲಿ ಹಾಸುಹೊಕ್ಕಾಗಿತ್ತು. ಈ ಬಾವುಟ ಜನರ ಹೃದಯಕ್ಕೆ ಹತ್ತಿರವಾಗಿತ್ತು.  ಇಂತಹ ಬಾವುಟವನ್ನು ಯಾವುದೇ ಸರ್ಕಾರ, ರಾಜಕಾರಣಿಗಳು, ಸಾಹಿತಿಗಳು ವಿರೋಧ ಮಾಡಿರಲಿಲ್ಲ. ವಿದೇಶಗಳಲ್ಲಿಯೂ ಈ ಬಾವುಟ ರಾರಾಜಿಸಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಹೊಸ ಬಾವುಟ ತರಲು ಹೊರಟಿದ್ದು, ಇದಕ್ಕೆ ನನ್ನ ಸಂಪೂರ್ಣ ವಿರೋಧವಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

loader