1967ರಲ್ಲಿ ಬೆಂಗಳೂರಿನ ಚಿಕ್ಕಪೇಟೆಯಿಂದ ಮೊದಲ ಬಾರಿಗೆ ಶಾಸನಸಭೆ ಪ್ರವೇಶಿಸಿದ ಅವರು, 1989,1994 ಹಾಗೂ 2004ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತವರು ಜಿಲ್ಲೆ ಚಾಮರಾಜನಗರ ಕ್ಷೇತ್ರದಿಂದ ಜಯಭೇರಿ ಬಾರಿಸಿದ್ದರು.
ವಿನೂತನ ಪ್ರತಿಭಟನೆಗಳಿಂದ ಹೆಸರುವಾಸಿಯಾಗಿರುವ ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ಸುಮಾರು ಐದು ದಶಕಗಳಿಂದ ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ವಿಧಾನಸಭೆಗೆ ಒಟ್ಟು ಐದು ಬಾರಿ ಆರಿಸಿಬಂದಿದ್ದಾರೆ. 1967ರಲ್ಲಿ ಬೆಂಗಳೂರಿನ ಚಿಕ್ಕಪೇಟೆಯಿಂದ ಮೊದಲ ಬಾರಿಗೆ ಶಾಸನಸಭೆ ಪ್ರವೇಶಿಸಿದ ಅವರು, 1989,1994 ಹಾಗೂ 2004ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತವರು ಜಿಲ್ಲೆ ಚಾಮರಾಜನಗರ ಕ್ಷೇತ್ರದಿಂದ ಜಯಭೇರಿ ಬಾರಿಸಿದ್ದರು. ವಿಧಾನಸಭೆ ಪ್ರವೇಶಿಸುವ ಮುನ್ನ 1964ರಲ್ಲಿ ಬೆಂಗಳೂರು ಪಾಲಿಕೆಗೂ ಆಯ್ಕೆಯಾಗಿದ್ದರು.
