ಬೆಂಗಳೂರು(ಸೆ.29): ಹೂಗುಚ್ಚ ಕೊಟ್ಟು ಸೀರೆ ಕೊಡೋದು ತಮಿಳುನಾಡು ಸರ್ಕಾರದ ಅಭ್ಯಾಸ. ಸೀರೆ ಪಡೆದವರು ಸರಿಯಾಗಿ ಸಭೆ ನಡೆಸದೆ ಕಾಟಾಚಾರಕ್ಕೆ ನಡೆಸಿದ್ದಾರೆ ಎಂದು ಕನ್ನಡ ಚಳವಳಿ ಪಕ್ಷದ ಮುಖಂಡ ಎಂದು ಕನ್ನಡ ಚಳವಳಿ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಕೇಂದ್ರ ಜಲ ಸಂಪನ್ಮೂಲ ಸಚಿವೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಪ್ರಧಾನಿ ಭಾಗವಹಿಸಿದ್ದರೆ ಸಭೆಗೆ ಅರ್ಥ ಬರುತ್ತಿತ್ತು. ಉಮಾ ಭಾರತಿ ತಮ್ಮ ಜವಾಬ್ದಾರಿ ನಿಭಾಯಿಸಲು ವಿಫಲವಾಗಿದ್ದಾರೆ. ಪ್ರಾಮಾಣಿಕವಾಗಿ ಸಭೆ ನಡೆಸಿಲ್ಲ. ತಜ್ಞರ ಸಮಿತಿ ಕರೆಸುವುದಕ್ಕೆ ತಮಿಳು'ನಾಡು ವಿರೋಧ ವ್ಯಕ್ತ'ಪಡಿಸುತ್ತಿದೆ ಇದು ಸರಿಯಲ್ಲ. ರಾಜ್ಯ ಸರ್ಕಾರ ಈಗ ಬದ್ಧವಾಗಿ ನೀರು ಬಿಡಬಾರದು.ಇದರಲ್ಲಿ ಯಾವುದೇ ಬದಲಾವಣೆ ಆಗಬಾರದು' ಎಂದು ನೀರು ಬಿಡದಿರಲು ಸರ್ಕಾರವನ್ನು ಒತ್ತಾಯಿಸಿದರು.
ಒಂದು ವೇಳೆ ಸರ್ಕಾರ ನಿರ್ಧಾರ ಬದಲಿಸಿದರೆ ಹೋರಾಟ ಕಟ್ಟಿಟ್ಟ ಬುತ್ತಿ. ಒಂದು ವೇಳೆ ನಾಳೆ ನೀರು ಬಿಡಬೇಕು ಎಂಬ ತೀರ್ಪು ಸುಪ್ರೀಂ'ನಿಂದ ಬಂದರೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರುಬಿಡಬಾರದು. ಸದನದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿರಬೇಕು ಎಂದು ವಾಟಾಳ್ ನಾಗರಾಜ್ ತಿಳಿಸಿದರು.
