Asianet Suvarna News Asianet Suvarna News

ರಾಜಸ್ಥಾನದಲ್ಲೂ ಕಡಿಮೆ ಬೆಲೆಗೆ ಸಿಗಲಿದೆ ಊಟ

ಬಡವರಿಗೆ ಉಚಿತವಾಗಿ ಊಟ ಪೂರೈಸಲು ರಾಜೆ ಅವರು ತಮ್ಮದೇ ಬ್ರಾಂಡ್‌'ನ ಕ್ಯಾಂಟೀನ್ ಅನ್ನು ಉದ್ಘಾಟನೆ ಮಾಡಿದ್ದಾರೆ.

Vasundhara Raje launches Annapurna Rasois

ಜೈಪುರ(ಡಿ.16): ಬಡವರಿಗೆ ಕಡಿಮೆ ದರದಲ್ಲಿ ಊಟ ಒದಗಿಸುವ ತಮಿಳುನಾಡು ಮಾದರಿಯ ಅಮ್ಮ ಕ್ಯಾಂಟೀನ್ ರೀತಿಯಲ್ಲಿ ರಾಜಸ್ಥಾನದಲ್ಲೂ ‘ಅನ್ನಪೂರ್ಣ ರಸಾಯ್’ ಅನ್ನು ಸಿಎಂ ವಸುಂದರಾ ರಾಜೆ ಸ್ಥಾಪನೆ ಮಾಡಿದ್ದು, ಇಲ್ಲಿ ₹5ರಿಂದ ₹8ರ ದರಕ್ಕೆ ಊಟ ದೊರೆಯಲಿದೆ.

ಬಡವರಿಗೆ ಉಚಿತವಾಗಿ ಊಟ ಪೂರೈಸಲು ರಾಜೆ ಅವರು ತಮ್ಮದೇ ಬ್ರಾಂಡ್‌'ನ ಕ್ಯಾಂಟೀನ್ ಅನ್ನು ಉದ್ಘಾಟನೆ ಮಾಡಿದ್ದಾರೆ. ‘ಅನ್ನಪೂರ್ಣ ರಸಾಯ್’ನಲ್ಲಿ ದೊರೆಯುವ ಆಹಾರ ಪದಾರ್ಥಗಳು 4 ಪಟ್ಟು ಕಡಿಮೆ ಬೆಲೆಗೆ ದೊರೆಯಲಿದೆ.

'ಅನ್ನಪೂರ್ಣ ರಸಾಯ್' ಎಲ್ಲರಿಗೂ ಆಹಾರ, ಎಲ್ಲರಿಗೂ ಗೌರವ(ಸಬ್'ಕೇಲಿಯೇ ಭೋಜನ್, ಸಬ್'ಕೇಲಿಯೇ ಸಮ್ಮಾನ್) ಎಂಬ ಧ್ಯೇಯವಾಕ್ಯದಡಿ ಈ ಯೋಜನೆ ಕಾರ್ಯನಿರ್ವಹಿಸಲಿದೆ.   

ಈ ಯೋಜನೆ ಜಾರಿಗೆ ಮುಂದಿನ ಆರ್ಥಿಕ ವರ್ಷದಲ್ಲಿ ₹4 ಕೋಟಿ ವ್ಯಯ ಮಾಡಬೇಕಿದೆ. ಅಲ್ಲದೆ, ರಾಜ್ಯಾದ್ಯಂತ ಇರುವ ಬಡವರಿಗೆ 200 ವಾಹನಗಳ ಮೂಲಕ ಊಟ ಒದಗಿಸಲು ನಿರ್ಧರಿಸಲಾಗಿದ್ದು, ರಾಜ್ಯ ಸರ್ಕಾರದ ಮೇಲೆ ₹50 ಕೋಟಿ ಹೊರೆ ಬೀಳಲಿದೆ.

Follow Us:
Download App:
  • android
  • ios