ಗಾಂಧಿ ಕುಡಿ! ವರುಣ್‌ಗೆ ಪ್ರಿಯಾಂಕಾ ನೆರವಾಗುವ ಸಾಧ್ಯತೆ

ಆಗ್ರಾ: ಬಿಜೆಪಿಯ ಅತೃಪ್ತರ ಬಳಗದ ಪ್ರಮುಖ ಸದಸ್ಯನೆಂದೇ ಬಿಂಬಿತವಾಗಿರುವ ಯುವ ಮುಖಂಡ, ಸಂಸದ ವರುಣ್ ಗಾಂಧಿ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಅವರನ್ನು ಬಲ್ಲ ಕೆಲ ಉತ್ತರಪ್ರದೇಶದ ಸ್ಥಳೀಯ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಸೋದರ ರಾಹುಲ್ ಗಾಂಧಿ ಅವರು ಇನ್ನೇನು ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ. ಆ ನಂತರ ವರುಣ್ ಕಾಂಗ್ರೆಸ್ ಸೇರಬಹುದು. ಅವರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ ಅಥವಾ ಪದಾಧಿಕಾರಿ ಹುದ್ದೆ ಕೊಡಬಹುದು’ ಎಂದು ಆಗ್ರಾದ ಮುಸ್ಲಿಂ ಕಾಂಗ್ರೆಸ್ ಮುಖಂಡ ಹಾಜಿ ಜಮಾಲುದ್ದೀನ್ ಹೇಳಿದ್ದಾರೆ.

ಇದುವರೆಗೂ ವರುಣ್ ರಾಹುಲ್ ವಿರುದ್ಧ ನೇರ ವಾಗ್ದಾಳಿ ಮಾಡಿಲ್ಲ. ವರುಣ್ ಕಾಂಗ್ರೆಸ್ ಸೇರ್ಪಡೆಗೆ ಪ್ರಿಯಾಂಕಾ ಗಾಂಧಿ ನೆರವಾಗಬಹುದು ಎನ್ನಲಾಗಿದೆ.

ಆದರೆ ಈ ಬಗ್ಗೆ ವರುಣ್ ಪ್ರತಿಕ್ರಿಯಿಸಿಲ್ಲ. ಆದರೆ ಇತ್ತೀಚಿಗೆ ಅವರು ಬಿಜೆಪಿಯ ಯಾವುದೇ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ.

ಬಿಜೆಪಿ ಹೇಳಿಕೆಗೆ ವ್ಯತಿರಿಕ್ತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇವೆಲ್ಲಾ ಅವರು ಪಕ್ಷದಿಂದ ದೂರ ಸಾಗುವ ಸೂಚನೆಗಳು ಎಂದು ಮೂಲಗಳು ತಿಳಿಸಿವೆ.