ತುಮಕೂರು [ಜು.04] :  ತೆಲುಗಿನ ಕ್ರಾಂತಿಕಾರಿ ಕವಿ ವರವರ ರಾವ್‌ ಅವರನ್ನು ಕರ್ನಾಟಕದ ಪಾವಗಡ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

ನಕ್ಸಲ್‌ ಹತ್ಯಾಕಾಂಡ ಪ್ರಕರಣ ಸಂಬಂಧ ಮಹಾರಾಷ್ಟ್ರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ವರವರ ರಾವ್ ಅವರನ್ನು ಹೈ ಕೋರ್ಟ್ ಆದೇಶದ ಮೇರೆಗೆ ಪೂನಾದಿಂದ ಕರೆತಂದು, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ತುಮಕೂರು ಜಿಲ್ಲೆ ಪಾವಗಡದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

2005 ರ ಫೆ.5 ರಂದು ಪಾವಗಡದ ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲ್ ಹತ್ಯಾಕಾಂಡ ನಡೆದಿದ್ದು, ಈ ಘಟನೆಯಲ್ಲಿ  ಓರ್ವ ನಾಗರಿಕ ಸೇರಿ 7 ಮಂದಿ ಪೊಲೀಸರು ಹತ್ಯೆಯಾಗಿದ್ದರು. ವರವರ ರಾವ್ ಪೊಲೀಸರ ಹತ್ಯಾಕಾಂಡದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದವರಿಗೆ ಸಹಕರಿಸಿದ್ದ ಆರೋಪ ಎದುರಿಸುತ್ತಿದ್ದರು. 

ಪಾವಗಡ ನಕ್ಸಲ್‌ ಅಟ್ಟಹಾಸ : ಚಿಂತಕ ವರವರರಾವ್‌ ವಶಕ್ಕೆ

 ಸದ್ಯ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ಆರೋಪದಡಿ ಅವರನ್ನು ಮಹಾರಾಷ್ಟ್ರದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.