ನಾಡಿನಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಮಹಿಳೆಯರು ಮಡಿ, ಮೈಲಿಗೆ ಯಿಂದ ಹೊಸ ಸೀರೆಯುಟ್ಟು ಆಚರಿಸುವ ಸಾಂಪ್ರದಾಯಿಕ ಹಬ್ಬವಿದು. ಹೀಗಾಗಿ ಮಾರುಕಟ್ಟೆಯಲ್ಲಿ ಹೂವಿನ ಹಬ್ಬದ ಪರ್ಚೇಸಿಂಗ್ ಭರಾಟೆ ಜೋರಾಗಿತ್ತು. ಇನ್ನು ಹಬ್ಬ ಬಂತಂದ್ರೆ ಮಾರುಕಟ್ಟೆಯಲ್ಲಿ ಹೂ, ಹಣ್ಣು ವ್ಯಾಪಾರದ ಭರಾಟೆಯು ಜೋರಾಗಿರುತ್ತೆ. ಹಾಗಿದ್ರೆ ಇವತ್ತು ಹೂ ಹಣ್ಣುಗಳ ದರ ಹೇಗಿದೆ ಅನ್ನೋದನ್ನ ನೋಡೋಣ.
ಬೆಂಗಳೂರು (ಆ.03): ನಾಡಿನಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಮಹಿಳೆಯರು ಮಡಿ, ಮೈಲಿಗೆ ಯಿಂದ ಹೊಸ ಸೀರೆಯುಟ್ಟು ಆಚರಿಸುವ ಸಾಂಪ್ರದಾಯಿಕ ಹಬ್ಬವಿದು. ಹೀಗಾಗಿ ಮಾರುಕಟ್ಟೆಯಲ್ಲಿ ಹೂವಿನ ಹಬ್ಬದ ಪರ್ಚೇಸಿಂಗ್ ಭರಾಟೆ ಜೋರಾಗಿತ್ತು. ಇನ್ನು ಹಬ್ಬ ಬಂತಂದ್ರೆ ಮಾರುಕಟ್ಟೆಯಲ್ಲಿ ಹೂ, ಹಣ್ಣು ವ್ಯಾಪಾರದ ಭರಾಟೆಯು ಜೋರಾಗಿರುತ್ತೆ. ಹಾಗಿದ್ರೆ ಇವತ್ತು ಹೂ ಹಣ್ಣುಗಳ ದರ ಹೇಗಿದೆ ಅನ್ನೋದನ್ನ ನೋಡೋಣ.
ನಾಳೆ ನಾಡಿನಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಡಗರ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಲಕ್ಷ್ಮಿ ಪೂಜೆ ಮಾಡಲು ಹೂ ಹಣ್ಣುಗಳ ವ್ಯಾಪಾರದ ಭರಾಟೆಯು ಜೋರಾಗಿದೆ. ಕಳೆದ ವಾರಕ್ಕೆ ಹೋಲಿಸಿದ್ರೆ ಹಬ್ಬದ ಹಿನ್ನಲೆ ಎಲ್ಲಾ ಹೂವಿನ ದರ ಕೂಡ ಜಾಸ್ತಿಯಾಗಿದೆ. ಅಷ್ಟೆ ಅಲ್ಲ ಒಂದೊಂದು ಮಾರ್ಕೆಟಲ್ಲಿ ಒಂದೊಂದು ರೀತಿ ಬೆಲೆಯಿದೆ. ಕೆ ಆರ್ ಮಾರ್ಕೆಟಲ್ಲಿ ಒಂದು ದರ ಆದ್ರೆ, ಇತ್ತ ಮಲ್ಲೇಶ್ವರಂ ಮಾರ್ಕೆಟಲ್ಲೆ ಬೇರೆ ದರ. ಹಾಗಿದ್ರೆ ಕೆಆರ್ ಹಾಗೂ ಮಲ್ಲೇಶ್ವರಂ ಮಾರ್ಕೆಟಲ್ಲಿ ದರ ಹೇಗಿದೆ ಇಲ್ಲಿದೆ ನೀಡಿ
ಹೂ ಕೆಆರ್ ಮಾರ್ಕೆಟ್ ದರ ಮಲ್ಲೇಶ್ವರಂ ಮಾರ್ಕೆಟ್ ದರ
ಕನಕಾಂಬರ (ಕೆಜಿ) 1600 ರೂ 2000 ರೂ
ಕಾಕಡ (ಕೆಜಿ) 400 ರೂ 600 ರೂ
ಗುಲಾಬಿ (ಕೆಜಿ) 240 ರೂ 300 ರೂ
ಮಲ್ಲಿಗೆ (ಕೆಜಿ) 800 ರೂ 1000 ರೂ
ಸುಗಂಧರಾಜ (ಕೆಜಿ) 160 ರೂ 400 ರೂ
ಸೇವಂತಿಗೆ ಮಾರ್ 120 ರೂ 200 ರೂ
ಆಮೂರ್ ಮಲ್ಲೆ (ಕೆಜಿ) 800 ರೂ 900 ರೂ
ತಾವರೆ ಜೋಡಿ 100 160 ರೂ
ಹಣ್ಣಿನ ದರವೂ ಗಗನಕ್ಕೇರಿದೆ.
ಸೇಬು ಹಣ್ಣು ಕೆಜಿ 160 ರೂ.
ದಾಳಿಂಬೆ 140 ರೂ
ಅನನಾಸು ಜೋಡಿ 80 ರೂ
ಬಾಳೆಹಣ್ಣು 10
ಹಬ್ಬಕ್ಕೆ ಬೇಕಾದ ಬಾಳೆ ಕಂದು, ಮಾವಿನೆಲೆ, ಹೂ ಹಣ್ಣುಗಳು ಹೀಗೆ ಎಲ್ಲವೂ ದರ ಗಗನಕ್ಕೇರಿದೆ. ಆದ್ರು ಜನ ಮಾತ್ರ ಹಬ್ಬದ ಸಂಭ್ರದಲ್ಲಿದ್ದು ಖರೀದಿಯಲ್ಲಿ ತೊಡಗಿದ್ದಾರೆ. ಈ ಬಾರಿಯ ವರಮಹಾಲಕ್ಷ್ಮಿ ಪೂಜೆ ಎಲ್ಲರಿಗೂ ಸಂತಸ ತರಲಿ. ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ವದ ಶುಭಾಶಯಗಳು.
