ಬೆಂಗಳೂರು ಮಹಿಳೆಯರೇ ಒಂಟಿಯಾಗಿ ಸಂಚರಿಸುವಾಗ ಹುಷಾರ್..!

First Published 3, Feb 2018, 12:14 PM IST
Vanity Bag Escape From Lady
Highlights

ಬೆಂಗಳೂರಿನಲ್ಲಿ ಇಷ್ಟು ದಿನಗಳ ಕಾಲ  ಚೈನ್ ಕಳ್ಳರ ಹಾವಳಿ ಮಿತಿ ಮೀರಿತ್ತು. ಇದೀಗ ವ್ಯಾನಿಟಿ ಬ್ಯಾಗ್ ಕಳ್ಳರು ತಮ್ಮ ಕೈಚಳಕ ತೋರಿಸಲು ಆರಂಭಿಸಿದ್ದಾರೆ.  

ಬೆಂಗಳೂರು : ಬೆಂಗಳೂರಿನಲ್ಲಿ ಇಷ್ಟು ದಿನಗಳ ಕಾಲ  ಚೈನ್ ಕಳ್ಳರ ಹಾವಳಿ ಮಿತಿ ಮೀರಿತ್ತು. ಇದೀಗ ವ್ಯಾನಿಟಿ ಬ್ಯಾಗ್ ಕಳ್ಳರು ತಮ್ಮ ಕೈಚಳಕ ತೋರಿಸಲು ಆರಂಭಿಸಿದ್ದಾರೆ.  

ಬೆಂಗಳೂರಿನ ಹೊಸ ಗುಡ್ಡದಹಳ್ಳಿಯಲ್ಲಿ ಕಳ್ಳನೋರ್ವ ಮಹಿಳೆಯನ್ನು ಹಿಂಬಾಲಿಸಿ ವ್ಯಾನಿಟಿ ಬ್ಯಾಗ್ ಎಸ್ಕೇಪ್​ ಮಾಡಿದ್ದಾನೆ. ಬಸ್ ಇಳಿದು ನಡೆದುಕೊಂಡು ಹೋಗುತ್ತಿದ್ದ ವೇಳೆ ಮಹಿಳೆಯನ್ನು ಹಿಂಬಾಲಿಸಿ ಈ ಕೃತ್ಯ ಎಸಗಿದ್ದಾನೆ.

ಖದೀಮನ ಕೃತ್ಯ ರಸ್ತೆ ಬದಿ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಚಾಮರಾಜ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

loader