ರಷ್ಯಾದಲ್ಲಿ ಅಭಿವೃದ್ಧಿ ಪಡಿಸಲಾದ ಬ್ಲೂವೇಲ್ ಸೂಸೈಡ್ ಗೇಮ್ ಎಂಬ ಭೂತ ಇದುವರೆಗೂ ವಿಶ್ವದಾದ್ಯಂತ 30 ಕ್ಕೂ ಹೆಚ್ಚು ಜನರನ್ನ ಬಲಿ ಪಡೆದುಕೊಂಡಿದೆ.
ಹುಬ್ಬಳ್ಳಿ, ಮಂಗಳೂರಿನ ನಂತರ ಬೆಂಗಳೂರಿನಲ್ಲಿ ಕೌಡುಬಂದ ಮೂರನೇ ಪ್ರಕರಣ ಇದಾಗಿದೆ. ಬ್ಲೂ ವೇಲ್ ಭೂತಕ್ಕೆ ಬಲಿಯಾಗಬೇಕಿದ್ದ ಇಬ್ಬರು ಬಾಲಕರಿಗೆ ವನಿತಾ ಸಹಾಯವಾಣಿ ಮರುಜೀವ ನೀಡಿದೆ.
ರಷ್ಯಾದಲ್ಲಿ ಅಭಿವೃದ್ಧಿ ಪಡಿಸಲಾದ ಬ್ಲೂವೇಲ್ ಸೂಸೈಡ್ ಗೇಮ್ ಎಂಬ ಭೂತ ಇದುವರೆಗೂ ವಿಶ್ವದಾದ್ಯಂತ 30 ಕ್ಕೂ ಹೆಚ್ಚು ಜನರನ್ನ ಬಲಿ ಪಡೆದುಕೊಂಡಿದೆ. ಸೂಸೈಡ್ ಗೇಮ್ ಅಂತಾನೆ ಫೇಮಸ್ ಆಗಿರೋ ಈ ಭಯಾನಕ ಗೇಮ್ ಗೆ ಅದ್ಯಾಕೋ ಯುವಕರು ಅತೀ ಹೆಚ್ಚು ಆಡಿಕ್ಟ್ ಆಗ್ತಿದ್ದು, ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ತಿದ್ದಾರೆ.
ಈ ಬ್ಲೂವೇಲ್ ಎಂಬ ಭೂತ ಇದೀಗ ಕರ್ನಾಟಕದ ಹುಬ್ಬಳ್ಳಿ ಮತ್ತು ಮಂಗಳೂರು ನಂತರ ಇದೀಗ ಸಿಲಿಕಾನ್ ಸಿಟಿಗೂ ಎಂಟ್ರಿ ಕೊಟ್ಟಿದೆ. ಆದರೆ ಬ್ಲುವೇಲ್ ಗೇಮ್'ಗೆ ಬಲಿಯಾಗುತ್ತಿದ್ಧ ಈ ಇಬ್ಬರು ಯುವಕರ ಪ್ರಾಣವನ್ನ ವನಿತಾ ಸಹಯವಾಣಿ ಕಾಪಾಡಿದೆ. ಸಿಲಿಕಾನ್ ಸಿಟಿಯ ಪ್ರತಿಷ್ಟಿತ ಕಾಲೇಜಿನಿಲ್ಲಿ ಬಿಕಾಂ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳು ಬ್ಲೂವೇಲ್ ಗೇಮ್ ಆಡುತ್ತಿದ್ದರಂತೆ. ಒಬ್ಬ ವಿದ್ಯಾರ್ಥಿ ಈಗಾಗಲೇ ಗೇಮ್'ನಲ್ಲಿರೋ 50 ಟಾಸ್ಕ್'ಗಳಲ್ಲಿ ಎರಡು ಟಾಸ್ಕ್'ಗಳನ್ನ ಪೂರ್ಣಗೊಳಿಸಿ, ಎರಡನೇ ಟಾಸ್ಕ್ ಆಡುವಂತೆ ತನ್ನ ಸ್ನೇಹಿತನಿಗೆ ಕಳುಹಿಸಿದ್ದಾನೆ. ವಿದ್ಯಾರ್ಥಿಗಳ ಚಲನವಲನ ಮತ್ತು ಮಾನಸಿಕ ಸ್ಥಿತಿಯನ್ನು ಗಮನಿಸಿದ ಫೋಷಕರು ಬ್ಲೂವೇಲ್ ಗೇಮ್ ಗುಂಗಿನಿಂದ ತಮ್ಮ ಮಕ್ಕಳನ್ನ ಹೊರಗೆ ತರುವಂತೆ ವನಿತ ಸಹಾಯವಾಣಿಯ ಮೋರೆ ಹೋಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯನ್ನ ಗಮನಿಸಿದ ವನಿತಾ ಸಹಾಯವಾಣಿಯ ಮುಖ್ಯಸ್ಥೆ ರಾಣಿಶೆಟ್ಟಿ ಇವರಿಬ್ಬರಿಗೆ ಕೌನ್ಸಿಲಿಂಗ್ ಮಾಡಿ ಪ್ರಾಣ ಉಳಿಸಿದ್ದು, ಯುವಕರ್ಯಾರು ಈ ಗೇಮ್ ಆಡದಂತೆ ಸಂದೇಶ ನೀಡಿದ್ದಾರೆ.
