ವೈರಸ್ ವಾನಾಕ್ರೈ ರಾನ್ಸಮ್ ವೇರ್ ದಾಳಿ ರಾಜಧಾನಿ ಬೆಂಗಳೂರಿನ ಮೇಲೂ ಆಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಕೆಲ ವಿಭಾಗದ ದಾಖಲಾತಿಗಳಿರುವ ಕಂಪ್ಯೂಟರ್ ಮೇಲೆ ವೈರಸ್ ಆಗಿದೆ. ಕೂಡಲೇ ಎಚ್ಚೆತ್ತುಕೊಂಡ ಪಾಲಿಕೆ ಅಂಟಿ ವೈರಸ್ ( antivirus) ಸಿಸ್ಟಮ್ ಅಳವಡಿಸಿಕೊಂಡಿದ್ದು, ವೈರಸ್ ದಾಳಿಯನ್ನು ಮರೆಮಾಚುವ ಕಾರ್ಯವನ್ನು ಪಾಲಿಕೆ ಅಧಿಕಾರಿಗಳು ಮಾಡಿದರು.
ಬೆಂಗಳೂರು (ಮೇ.17): ವೈರಸ್ ವಾನಾಕ್ರೈ ರಾನ್ಸಮ್ ವೇರ್ ದಾಳಿ ರಾಜಧಾನಿ ಬೆಂಗಳೂರಿನ ಮೇಲೂ ಆಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಕೆಲ ವಿಭಾಗದ ದಾಖಲಾತಿಗಳಿರುವ ಕಂಪ್ಯೂಟರ್ ಮೇಲೆ ವೈರಸ್ ಆಗಿದೆ. ಕೂಡಲೇ ಎಚ್ಚೆತ್ತುಕೊಂಡ ಪಾಲಿಕೆ ಅಂಟಿ ವೈರಸ್ ( antivirus) ಸಿಸ್ಟಮ್ ಅಳವಡಿಸಿಕೊಂಡಿದ್ದು, ವೈರಸ್ ದಾಳಿಯನ್ನು ಮರೆಮಾಚುವ ಕಾರ್ಯವನ್ನು ಪಾಲಿಕೆ ಅಧಿಕಾರಿಗಳು ಮಾಡಿದರು.
ಪಾಲಿಕೆ ಲೆಕ್ಕ ವಿಭಾಗಕ್ಕೂ ವೈರಸ್ ದಾಳಿ ತಕ್ಷಣವೇ ಎಚ್ಚೆತ್ತುಕೊಂಡ ಪಾಲಿಕೆಯ ಐಟಿ ವಿಭಾಗ
ಅಂದಹಾಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಲೆ ವೈರಸ್ ಅಟ್ಯಾಕ್ ಆಗಿದೆ. ಲೆಕ್ಕ ವಿಭಾಗ ಕಚೇರಿಯಲ್ಲಿನ ಸಿಸ್ಟಮ್ ಗಳು ಕಳೆದ ಸೋಮವಾರ ಹಾಗೂ ಮಂಗಳವಾರ ಕಾರ್ಯ ಸ್ಥಗಿತ ಮಾಡಿದ್ದವು ಎಂಬ ಮಾಹಿತಿ ತಿಳಿದು ಬಂದಿದೆ. ವಾನಾಕ್ರೈ ರಾನ್ಸಮ್'ವೇರ್ ವೈರಸ್ ದಾಳಿಯಿಂದ ಗಲಿಬಿಲಿ ಆದ ಪಾಲಿಕೆ ಅಧಿಕಾರಿಗಳು ಎರಡು ದಿನ ದೈನಂದಿನ ಕಾರ್ಯವನ್ನು ಸ್ಥಗಿತ ಮಾಡಿದ್ದರು ಎಂದು ಪಾಲಿಕೆಯ ಮೂಲಗಳಿಂದ ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ಸೋರಿಕೆ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಪಾಲಿಕೆ ಐಟಿ ವಿಭಾಗ ಸಂಬಂಧಪಟ್ಟ ಸಿಸ್ಟಮ್'ಗಳ ಸಾಫ್ಟ್'ವೇರ್ ಅಪ್'ಡೇಟ್ ಮಾಡಿದೆ. ಸಿಸ್ಟಮ್'ಗಳಲ್ಲಿ ಆಂಟಿ ವೈರಸ್ (antivirus) ಅಪ್'ಡೇಟ್ ಆದ ಬಳಿಕ ಅಧಿಕಾರಿಗಳು ಎಂದಿನಂತೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಆದರೆ ವಾನಾಕ್ರೈ ದಾಳಿ ಆಗಿರುವ ಬಗ್ಗೆ ಬಹಿರಂಗವಾಗಿ ಒಪ್ಪಿಕೊಳ್ಳಲು ಪಾಲಿಕೆ ಅಧಿಕಾರಿಗಳು ಸಿದ್ದರಿಲ್ಲ. ಆ ರೀತಿಯ ವೈರಸ್ ದಾಳಿ ನಮ್ಮಲ್ಲಿ ಆಗಿಲ್ಲ. ಪಾಲಿಕೆಯ ಸರ್ವರ್ ನಿಯಂತ್ರಣ ಮಾಡುವ ವಲ್ಲಬ ಸಾಪ್ಟವೇರ್ ಸಿಬ್ಬಂದಿಗಳು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಒಟ್ನಲ್ಲಿ ಜಗತ್ತಿನಲ್ಲೆಡೆ ತಲ್ಲಣ ಸೃಷ್ಟಿಸಿರುವ ವಾನಾಕ್ರೈ ರಾನ್ಸಮ್ ವೇರ್ ವೈರಸ್ ದಾಳಿ ಪಾಲಿಕೆಯ ಮೇಲೂ ಆಗಿದೆ.ತೆರೆಯ ಮರೆಯಲ್ಲಿ ಸರಿಪಡಿಸಿಕೊಂಡ ಪಾಲಿಕೆ ಅಧಿಕಾರಿಗಳು ದಾಳಿ ವಿವರ ಮುಚ್ಚಿಡಲು ಯತ್ನಿಸುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.
