ದೆಹಲಿಯ ದಯಾಳ್ ಸಿಂಗ್ ಕಾಲೇಜಿನ ಹೆಸರು ಬದಲಾವಣೆ ಮಾಡಲು ನಿರ್ಧರಿಸಿದ್ದು ಕಾಲೇಜಿಗೆ ವಂದೇ ಮಾತರಂ ವಿದ್ಯಾಲಯ ಅಂತ ಹೆಸರಿಡಲು ನಿರ್ಧರಿಸಲಾಗಿದೆ.

ನವದೆಹಲಿ: ದೆಹಲಿಯ ದಯಾಳ್ ಸಿಂಗ್ ಕಾಲೇಜಿನ ಹೆಸರು ಬದಲಾವಣೆ ಮಾಡಲು ನಿರ್ಧರಿಸಿದ್ದು ಕಾಲೇಜಿಗೆ ವಂದೇ ಮಾತರಂ ವಿದ್ಯಾಲಯ ಅಂತ ಹೆಸರಿಡಲು ನಿರ್ಧರಿಸಲಾಗಿದೆ.

ಇದಕ್ಕೆ ಕಾಲೇಜಿನ ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದು ಸದ್ಯದಲ್ಲೇ ನೂತನ ಹೆಸರು ಇಡಲಾಗುವುದು ಎಂದು ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥ ಅಮಿತಾಬ್ ಸಿನ್ಹಾ ಹೇಳಿದ್ದಾರೆ. 

ವಂದೇ ಮಾತರಂ ಎಂಬ ಹೆಸರು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುತ್ತದೆ. ಕಾಲೇಜಿಗೆ ಈ ಹೆಸರು ಇಡುವುದರ ಮೂಲಕ ದೇಶ ಕಾಯುವ ಯೋಧರಿಗೆ ನಾವು ನೀಡುತ್ತಿರುವ ಕೊಡುಗೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಕಾಲೇಜು ಆಡಳಿತ ಮಂಡಳಿ ಸಭೆ ನಡೆಸಲಿದ್ದು ಅಲ್ಲಿ ವಂದೇ ಮಾತರಂ ವಿದ್ಯಾಲಯ ಎಂಬ ಹೆಸರು ಅಂತಿಮವಾಗುವ ಸಾಧ್ಯತೆ ಇದೆ.