ವಾಜಪೇಯಿ ಸ್ಮರಿಸಿದ ಪ್ರಧಾನಿ ಮೋದಿ! ಅಟಲ್ ಸ್ಮರಣಾರ್ಥ ಪ್ರಾರ್ಥನಾ ಸಭೆ! ಅಟಲ್ ನೆನೆದು ಗದ್ಗದಿತರಾದ ಅಡ್ವಾಣಿ! ವಿಪಕ್ಷ ನಾಯಕರಿಂದಲೂ ಅಟಲ್ ಗುಣಗಾನ 

ನವದೆಹಲಿ(ಆ.20): ಭಾರತದ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ತಮ್ಮ ಬದುಕನ್ನು ಈ ದೇಶದ ಜನರಿಗಾಗಿ ಮುಡಿಪಾಗಿಟ್ಟಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿಯಲ್ಲಿ ಇಂದು ಅಟಲ್ ಜೀಯವರ ಸ್ಮರಣಾರ್ಥ ನಡೆದ ಪ್ರಾರ್ಥನಾ ಸಭೆಯಲ್ಲಿ ಮಾತನಾಡಿದ ಮೋದಿ, ಭಾರತೀಯರ ಸೇವೆ ಮಾಡಲು ಅಟಲ್ ಯುವಕರಿದ್ದಾಗಲೇ ನಿರ್ಧರಿಸಿದ್ದರು ಎಂದು ಹೇಳಿದರು.

Scroll to load tweet…

ಈ ದೇಶದಲ್ಲಿ ಕೇವಲ ಒಂದೇ ಒಂದು ಪಕ್ಷ ತನ್ನ ಪ್ರಾಬಲ್ಯ ಹೊಂದಿದ್ದಾಗ ಅಟಲ್ ರಾಜಕೀಯ ಜೀವನ ಪ್ರವೇಶಿಸಿದರು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಮರಿಸಿಕೊಂಡರು. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಅವರು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಆದರೆ ತಮ್ಮ ತತ್ವ, ಆದರ್ಶಗಳಿಗೆ ಅವರೆಂದೂ ರಾಜಿಯಾಗಿರಲಿಲ್ಲ ಎಂದು ಮೋದಿ ಅಭಿಪ್ರಾಯಪಟ್ಟರು. 

ಭಾರತವನ್ನು ಪ್ರಬಲ ಪರಮಾಣು ಶಕ್ತಿ ರಾಷ್ಟ್ರವನ್ನಾಗಿ ಮಾಡಲು ಅಟಲ್ ಅವರ ಅವಿರತ ಪರಿಶ್ರಮದಿಂದ ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳಾಗಿವೆ. ಅವರು ಯಾವುದೇ ಒತ್ತಡಗಳಿಗೆ ಎದೆಗುಂದಲಿಲ್ಲ ಎಂದು ಮೋದಿ ಸ್ಮರಿಸಿದರು.

Scroll to load tweet…

ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ ಮಾತನಾಡಿ, ತಮ್ಮ ಬಹುಕಾಲದ ಸ್ನೇಹಿತನನ್ನು ನೆನೆದು ಗದ್ಗದಿತರಾದರು. ಇದೇ ವೇಳೆ ಪ್ರತಿಪಕ್ಷ ಮುಖಂಡರಾದ ಕಾಂಗ್ರೆಸ್ ನ ಗುಲಾಂ ನಬಿ ಆಜಾದ್, ಸಿಪಿಐ ಮುಖಂಡ ಡಿ. ರಾಜಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಎನ್‌ಸಿ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ, ಬಾಬಾ ರಾಮದೇವ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಬಾಗವತ್ ಕೂಡ ಮಾತನಾಡಿದರು.

Scroll to load tweet…
Scroll to load tweet…
Scroll to load tweet…